ಮದ್ಯ ಅಕ್ರಮ ಮಾರಾಟಕ್ಕೆ ಅವಕಾಶ, ಪ್ರಕರಣ ದಾಖಲು

ಮದ್ಯ ಅಕ್ರಮ
ಮದ್ಯ ಅಕ್ರಮ
Published on
ಬೆಳಗಾವಿ: ಹಲಗಾ ಸುವರ್ಣಾ ಪ್ಯಾಲೇಸ್ ಹೋಟೆಲ್ ಹಿಂದಿನ ಖುಲ್ಲಾ ಜಾಗದಲ್ಲಿ ಮದ್ಯ ಅಕ್ರಮ ಮಾರಾಟದ ಜತೆಗೆ ಮದ್ಯ ಸೇವನೆಗೂ ಅವಕಾಶ ಮಾಡಿಕೊಟ್ಟಿದ್ದನ್ನು ಪತ್ತೆ ಮಾಡಿರುವ ಹಿರೇಬಾಗೇವಾಡಿ ಠಾಣೆ ಪೊಲೀಸರು, ಅಬಕಾರಿ ಕಾಯಿದೆಯಡಿ ಹಲಗಾದ ಪಾಟೀಲ ಗಲ್ಲಿಯ ಭೂಪಾಲ ಅಭಯ ದೇಸಾಯಿ (48) ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಮದ್ಯದ ಪಾಕೇಟ್ ವಶಪಡಿಸಿಕೊಂಡಿದ್ದಾರೆ.
ಮಟ್ಕಾ ದಾಳಿ: ಮಾರ್ಕೆಟ್ ಠಾಣೆ ಪೊಲೀಸರು ಹಳೇ ತರಕಾರಿ ಮಾರುಕಟ್ಟೆಯ ಪಾರ್ಕಿಂಗ್ ಸ್ಥಳದಲ್ಲಿ ಮಟ್ಕಾ ಆಡುತ್ತಿದ್ದ ಕೋತ್ವಾಲ್ ಗಲ್ಲಿಯ ಆಸೀಫ್ ಶೇಖ್, ಟೀಚರ್ಸ್‌ ಕಾಲನಿಯ ಸುನೀಲ ಜಾಧವ, ಕಾಕತಿಯ ಆರೀಫ್ ಶಾಪೂರಿಯನ್ನು ವಶಕ್ಕೆ ಪಡೆದು, 1,790ರೂ. ನಗದು ಮತ್ತು ಮಟ್ಕಾ ಚೀಟಿ ಜಪ್ತಿ ಮಾಡಿಕೊಂಡಿದ್ದಾರೆ.
ಖಡೇಬಜಾರ್ ಠಾಣೆ ಪೊಲೀಸರು, ನಗರದ ಶಿವಾಜಿ ರಸ್ತೆಯ ನಾಲಾ ಹತ್ತಿರ ಸಾರ್ವಜನಿಕ ರಸ್ತೆ ಪಕ್ಕದಲ್ಲಿ ಮಟ್ಕಾ ಆಡುತ್ತಿದ್ದ ತಹಸೀಲ್ದಾರ್ ಗಲ್ಲಿಯ ವಿನಾಯಕ ಸಾಂಬ್ರೇಕರ ಮತ್ತು ರಮೇಶ ಗೆಂಜಿ ವಿರುದ್ಧ ಪ್ರಕರಣ ದಾಖಲಿಸಿ 1,020ರೂ. ವಶಪಡಿಸಿಕೊಂಡಿದ್ದಾರೆ.
ವಡಗಾವಿ ಮಲಪ್ರಭಾ ನಗರದಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಮಟ್ಕಾ ಆಡಿಸುತ್ತಿದ್ದ ವೇಳೆ ದಾಳಿ ಮಾಡಿರುವ ಶಹಾಪುರ ಠಾಣೆ ಪೊಲೀಸರು ಮಲ್ಲಿಕಾರ್ಜುನ ಯಲ್ಲಪ್ಪ ಕಾಂಬಳೆ(40) ವಿರುದ್ಧ ಪ್ರಕರಣ ದಾಖಲಿಸಿಕೊಂಡು
1,250ರೂ. ಮತ್ತು ಮಟ್ಕಾ ಚೀಟಿ ವಶಪಡಿಸಿಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net