ಚನ್ನಮ್ಮನ ಕಿತ್ತೂರಿನ ರಾಜಗುರು ಗುರುಸಿದ್ಧ ಸ್ವಾಮೀಜಿ ಸರ್ಕಾರಿ ಪಪೂ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸ್ನೇಹ ಸಮ್ಮೇಳನ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಆರ್.ಎಫ್.ಲೋಟಗೇರಿ, ಜಿ.ಎಂ.ಗಣಾಚಾರಿ, ಎಸ್.ಬಿ.ಪೆಂಟೇದ ಇತರರಿದ್ದರು.
ಪಟ್ಟಣದ ರಾಜಗುರು ಗುರುಸಿದ್ಧ ಸ್ವಾಮೀಜಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ನೇಹ ಸಮ್ಮೇಳನ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಕಿತ್ತೂರು ನಾಡಿಗೆ ವಿಶೇಷ ಶಕ್ತಿ ಇದೆ. ಇಂತಹ ವೀರತ್ವದ ಭೂಮಿಯಲ್ಲಿ ಕಾಲೇಜು ಇಂದು ದೊಡ್ಡಮಟ್ಟದಲ್ಲಿ ಬೆಳೆದು ನಿಂತಿದೆ. ಅತ್ಯಾಧುನಿಕ ಶೈಕ್ಷಣಿಕ ವ್ಯವಸ್ಥೆ ಹೊಂದಿ ಕಾಲೇಜು ಉತ್ತಮ ಸೇವೆ ನೀಡುತ್ತಿದೆ. ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ನಿವೃತ್ತ ಪ್ರಾಚಾರ್ಯ ಜಿ.ಎಂ.ಗಣಾಚಾರಿ ಮಾತನಾಡಿ, ವಿದ್ಯಾರ್ಥಿಗಳು ನಿರಂತರ ಅಧ್ಯಯನ ಹಾಗೂ ಶಿಕ್ಷಕರ ಮಾರ್ಗದರ್ಶನ ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಪ್ರಭಾರ ಪ್ರಾಚಾರ್ಯ ಎಸ್.ಬಿ.ಪೆಂಟೇದ ಪ್ರಾಸ್ತಾವಿಕ ಮಾತನಾಡಿದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರಾಧ್ಯಾಪಕರಾದ ಯು.ವೈ.ಸನದಿ, ವಿ.ಜಿ.ಬಡಿಗೇರ, ಎಂ.ಎಸ್.ಹಿರೇಮಠ, ಎಂ.ಆರ್.ಉಳ್ಳೇಗಡ್ಡಿ, ಪಿ.ಬಿ.ಲದ್ದಿಮಠ, ಥಾನೇಶ್ ಲಮಾಣಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಇತರರಿದ್ದರು.