ಚಿಕ್ಕಮಕ್ಕಳಂತೆ ಇನ್ನು ಕೇಳುವುದಿಲ್ಲ

ಅಶೋಕ ಪಟ್ಟಣ
ಅಶೋಕ ಪಟ್ಟಣ
Published on
ಬೆಳಗಾವಿ : ಇನ್ನು ಮುಂದೆ ಪದೇ ಪದೇ ಚಿಕ್ಕ ಮಕ್ಕಳ ರೀತಿಯಲ್ಲಿ ಸಚಿವ ಸ್ಥಾನ ನೀಡಿ ಎಂದು ಕೇಳುವುದಿಲ್ಲ. ಇದಕ್ಕಾಗಿ ಮುಖ್ಯಮಂತ್ರಿ ಹಿಂದೆ ಬೀಳುವುದಿಲ್ಲ. ಸಚಿವ ಸ್ಥಾನಕ್ಕಿಂತೂ ಸ್ವಾಭಿಮಾನ ದೊಡ್ಡದು ಎಂದು ಹೇಳುವ ಮೂಲಕ ಅಶೋಕ ಪಟ್ಟಣ ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಮುಖ್ಯಮಂತ್ರಿ ಭೇಟಿಯ ವೇಳೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂದರ್ಭಕ್ಕನುಸಾರವಾಗಿ ಮಂತ್ರಿ ಮಂಡಲ ವಿಸ್ತರಣೆಯಾಗುತ್ತದೆ. ಬೆಳಗಾವಿ ಜಿಲ್ಲೆಗೆ 3 ಸಚಿವ ಸ್ಥಾನ ಕೇಳಿದ್ದೇವೆ. ನಾವು ಎಷ್ಟು ಕೆಲಸ ಮಾಡಿದ್ದೇವೆ?, ಎಷ್ಟು ನಿಷ್ಠಾವಂತರು ಎಂಬುದು ಮುಖ್ಯಮಂತ್ರಿಗೂ ಗೊತ್ತಿದೆ. ಆದರೆ, ಪ್ರಮಾಣ ವಚನ ಸ್ವೀಕರಿಸಿದ ಮೇಲೆಯೇ ಮಂತ್ರಿ ಸ್ಥಾನ ಖಚಿತ ಅಂದುಕೊಳ್ಳಬೇಕಿದೆ ಎಂದು ನಗುತ್ತ ಹೇಳಿದರು.
ನನ್ನ ರಾಜಕೀಯ ನಿವೃತ್ತಿ ಎಲ್ಲವೂ ಊಹಾಪೋಹ. ನನ್ನ ಉಸಿರಿರುವವರೆಗೂ ರಾಜಕಾರಣ ಮಾಡುತ್ತೇನೆ. ಮುಂದಿನ ಚುನಾವಣೆಗೂ ಸಿದ್ಧವಾಗ್ತಿದ್ದೇನೆ. ಎಲ್ಲೂ ನಾನು ಕೊನೆಯ ಚುನಾವಣೆ ಮಾತು ಹೇಳಿಲ್ಲ. ವಿರೋಧಿಗಳೇ ಅಪಪ್ರಚಾರ ಮಾಡುತ್ತಿದ್ದಾರೆ. ಒಂದು ವೇಳೆ ಆರೋಗ್ಯ ಕೈಕೊಟ್ಟರೇ ಮಾತ್ರ ರಾಜಕೀಯದಿಂದ ದೂರು ಉಳಿದು ಅದನ್ನು ನನ್ನ ಕುಟುಂಬದಲ್ಲಿರುವ ಮುಂದಿನ ಪೀಳಿಗೆಯವರಿಗೆ ನೀಡಬಲ್ಲೆ ಎಂದು ಮಾರ್ಮಿಕವಾಗಿ ಹೇಳಿದರು.
ಸಿದ್ದರಾಮಯ್ಯ ಮತ್ತು ಸತೀಶ ಜಾರಕಿಹೊಳಿ ಚೆನ್ನಾಗಿಯೇ ಇದ್ದಾರೆ. ಆದರೆ ಮಾಧ್ಯಮಗಳೇ ಏನೇನೋ ಸೃಷ್ಟಿಸುತ್ತಿವೆ. ಒಮ್ಮೊಮ್ಮೆ ನನ್ನ ಪಕ್ಕದಲ್ಲಿ ಇದ್ದರೂ ಸಿದ್ದರಾಮಯ್ಯ ಅವರು ಮಾತನಾಡುವುದಿಲ್ಲ. ಕೆಲವೊಮ್ಮೆ ದೇಹ ಇಲ್ಲೇ ಇರುತ್ತದೆ, ತಲೆ ಎಲ್ಲಿಯೋ ಇರುತ್ತದೆ. ಸಿದ್ದರಾಮಯ್ಯ ಸಕ್ರಿಯ ರಾಜಕಾರಣದಲ್ಲಿದ್ದಾರೆ. ಮನೆಯಲ್ಲಿ ಆರಾಮವಾಗಿದ್ದಾರೆ. ಮುಂದಿನ ಚುನಾವಣೆಗೆ ತಯಾರಿ ಮಾಡುತ್ತಾರೆ ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net