ಕಳೆದ ಆರು ವರ್ಷದ ಅವಧಿಯಲ್ಲಿ ಸಿಎಸ್‌ಆರ್, ಡಿಎಂಎಫ್ ಸೇರಿ ವಿವಿಧ ಯೋಜನೆಗಳ ಹಾಗೂ ವಿವಿಧ ಇಲಾಖೆಗಳ ಅನುದಾನಗಳ ಮೂಲಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದೇನೆ. 181 ಸಮುದಾಯ ಭವನ, 65 ಬಸ್ ಶೆಲ್ಟರ್, 11 ಸ್ಮಾರ್ಟ್ ಕ್ಲಾಸ್, 25 ಶಾಲಾ ಕಟ್ಟಡ, 3 ಅಂಬ್ಯೂಲೆನ್ಸ್, 4 ವ್ಯಾಯಾಮ ಶಾಲೆ, ಶವಸಂಸ್ಕಾರ ಕೇಂದ್ರ, ಶಾಲಾ ಪೀಠೋಪಕರಣ,ದೇವಸ್ಥಾನಗಳ ಜೀರ್ಣೋದ್ಧಾರ, ಬಡವರು, ಬೆಳಗಾವಿ ಇಎಸ್‌ಐ ಆಸ್ಪತ್ರೆ ನಿರ್ಮಾಣ ಟೆಂಡರ್ ಹಂತದಲ್ಲಿದೆ. ಆಕ್ಸಿಜನ್ ಘಟಕ ಸ್ಥಾಪನೆ, ಗೋಕಾಕದಲ್ಲಿ ಮಾಜಿ ಸೈನಿಕಾರಿಗಾಗಿ ಕ್ಯಾಂಟೀನ್, ಹಿಂದುಳಿದ ವರ್ಗದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಕೇಂದ್ರ ಸರ್ಕಾರದಿಂದ ಜಿಲ್ಲೆಗೆ ಹೊಸ ಯೋಜನೆಗಳ ಜಾರಿಗೆ ತರಲು ಪ್ರಯತ್ನಿಸಿದ್ದೇನೆ. ರೈಲ್ವೆ, ಹೆದ್ದಾರಿ, ವಿಮಾನ ನಿಲ್ದಾಣಗಳ ಅಭಿವೃದ್ಧಿ ಸರ್ಕಾರದ ಮೇಲೆ ಒತ್ತಡ ಹಾಕಿ ಅನುದಾನ ಬಿಡುಗಡೆ ಮಾಡಿಸಿದ್ದೇನೆ.