ಮಾನವೀಯ ಸೇವೆ ಶಾಶ್ವತ

ಘೋಡಗೇರಿಯಲ್ಲಿ ಹಮ್ಮಿಕೊಂಡಿದ್ದ ಶಿವಾನಂದ ಮಠದ ಜಾತ್ರೋತ್ಸವದಲ್ಲಿ ಮಲ್ಲಯ್ಯ ಸ್ವಾಮೀಜಿ ಮಾತನಾಡಿದರು. ಗುರುಸಿದ್ಧೇಶ್ವರ ಸ್ವಾಮೀಜಿ, ಮುಕ್ತಾನಂದ ಸ್ವಾಮೀಜಿ, ಅಭಿನವ ಬಸವಣ್ಣಜ್ಜ ಇತರರಿದ್ದರು.
ಘೋಡಗೇರಿಯಲ್ಲಿ ಹಮ್ಮಿಕೊಂಡಿದ್ದ ಶಿವಾನಂದ ಮಠದ ಜಾತ್ರೋತ್ಸವದಲ್ಲಿ ಮಲ್ಲಯ್ಯ ಸ್ವಾಮೀಜಿ ಮಾತನಾಡಿದರು. ಗುರುಸಿದ್ಧೇಶ್ವರ ಸ್ವಾಮೀಜಿ, ಮುಕ್ತಾನಂದ ಸ್ವಾಮೀಜಿ, ಅಭಿನವ ಬಸವಣ್ಣಜ್ಜ ಇತರರಿದ್ದರು.
Published on
ಬೆಳಗಾವಿ: ಮಾನವ ದೇಹ ಶಾಶ್ವತವಲ್ಲ. ಆದರೆ, ಮಾನವ ಮಾಡಿದ ಪರೋಪಕಾರ, ಸೇವೆ ಉಸಿರು ನಿಂತ ಮೇಲೂ ಹೆಸರು ಉಳಿಯುವಂತೆ ಮಾಡುತ್ತವೆ ಎಂದು ಶಿವಾನಂದ ಮಠದ ಮಲ್ಲಯ್ಯ ಸ್ವಾಮೀಜಿ ಹೇಳಿದರು.
ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಚನ್ನಬಸವದೇವರ ೩೪ನೇ ಪುಣ್ಯಸ್ಮರಣೆ ಹಾಗೂ ಶ್ರೀ ಶಿವಾನಂದ ಮಠದ ಜಾತ್ರಾ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ಸ್ವಾರ್ಥ ಬದಿಗಿಟ್ಟು, ಸಮಾಜದ ಹಿತಕ್ಕಾಗಿ ಬದುಕಿದಾಗಲೇ ಜೀವನ ಸಾರ್ಥಕವಾಗುತ್ತದೆ. ಅಧಿಕಾರ, ಸಂಪತ್ತು ಮತ್ತು ಜ್ಞಾನ ಎಲ್ಲವೂ ಸಾಮಾಜಿಕ ಒಳಿತಿಗಾಗಿ ವಿನಿಯೋಗವಾದಾಗ ಮೌಲ್ಯ ಇರುತ್ತದೆ ಎಂದರು.
ಕುಂದಗೋಳ ಕಲ್ಯಾಣಪುರದ ಅಭಿನವ ಬಸವಣ್ಣಜ್ಜನವರು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಸ್ವಕೇಂದ್ರಿತ ಜೀವನಶೈಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪರಹಿತದ ಮಾರ್ಗವೂ ಅಧಿಕವಾಗುತ್ತಿದೆ. ದುರ್ಬಲರಿಗೆ ಸಹಾಯ, ಸೇವಾ ಮನೋಭಾವ ಹಾಗೂ ಮಾನವೀಯ ಮೌಲ್ಯ ಉಳಿವಿಗೆ ಶ್ರಮಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.
ನೂಲ ಸುರಗೀಶ್ವರಮಠದ ಗುರುಸಿದ್ಧೇಶ್ವರ ಸ್ವಾಮೀಜಿ, ಮುನವಳ್ಳಿ-ಸಿಂಧೋಗಿಯ ಮುಕ್ತಾನಂದ ಸ್ವಾಮೀಜಿ, ಕುಂದಗೋಳ ಶಿವಾನಂದ ಮಠದ ಶಿವಾನಂದ ಸ್ವಾಮೀಜಿ, ಮುಖಂಡ ಪಾಂಡು ಮನ್ನಿಕೇರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net