ಶರಣರ ಸಾಹಿತ್ಯದಲ್ಲಿದೆ ಮಾನವೀಯ ಚಿಂತನೆ

ಕಾಗವಾಡ ಪಟ್ಟಣದ ಶಿವಾನಂದ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಶ್ರದ್ಧಾನಂದ ಸ್ವಾಮೀಜಿ ಚಾಲನೆ ನೀಡಿದರು.
ಕಾಗವಾಡ ಪಟ್ಟಣದ ಶಿವಾನಂದ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಶ್ರದ್ಧಾನಂದ ಸ್ವಾಮೀಜಿ ಚಾಲನೆ ನೀಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರೊ.ಬಿ.ಎಲ್.ಲಕ್ಕಣ್ಣವರ ಹೇಳಿಕೆ
  • ಶಿವಾನಂದ ಮಹಾವಿದ್ಯಾಲಯದಲ್ಲಿ ಆಯೋಜನೆ
  • ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ
ಕಾಗವಾಡ: ಶರಣ ಸಾಹಿತ್ಯ ಮಾನವೀಯ ಚಿಂತನೆಗಳನ್ನೊಳಗೊಂಡಿದ್ದು, ಇದರ ಮೂಲ ಉದ್ದೇಶ ಸಮಾಜದಲ್ಲಿ ಅಸಮಾನತೆ, ಮೂಢನಂಬಿಕೆ ಹೋಗಲಾಡಿಸುವುದಾಗಿದೆ ಎಂದು ವಿಜಯಪುರದ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್.ಲಕ್ಕಣ್ಣವರ ಹೇಳಿದರು. 
ಪಟ್ಟಣದ ಶಿವಾನಂದ ಮಹಾವಿದ್ಯಾಲಯದಲ್ಲಿ ಶರಣ ಸಾಹಿತ್ಯದಲ್ಲಿ ಮಾನವೀಯ ಚಿಂತನೆ ವಿಷಯದ ಕುರಿತು ಗುರುವಾರ ಹಮ್ಮಿಕೊಂಡಿದ್ದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. 
ಸದಲಗಾದ ಗೀತಾಶ್ರಮದ ಪೀಠಾದೀಶ ಶ್ರದ್ಧಾನಂದ ಸ್ವಾಮೀಜಿ, ಪ್ರೊ.ಮಹೇಶ ಚಿಂತಾಮಣಿ, ಪ್ರಾಚಾರ್ಯ ಡಾ.ಎಸ್.ಪಿ.ತಳವಾರ, ಆಡಳಿತಾಧಿಕಾರಿ ಮೇಜರ್ ವಿ.ಎಸ್.ತುಗಶೆಟ್ಟಿ ಮಾತನಾಡಿದರು. ಡಾ.ಮಲ್ಲಿಕಾರ್ಜುನ ಮೇತ್ರಿ, ಡಾ.ವೈ.ವೈ.ಕೊಕ್ಕನವರ, ಡಾ.ಎಂ.ಎಸ್.ದುರ್ಗಾಪ್ರವೀಣ, ಡಾ.ವಿ.ಎಸ್.ಮಾಳಿ ಉಪನ್ಯಾಸ ನೀಡಿದರು. ಡಾ.ಬಾಳಾಸಾಹೇಬ ಲೋಕಾಪುರ, ಬಿ.ಎ.ಪಾಟೀಲ ಇತರರಿದ್ದರು. 
ವಿಚಾರ ಸಂಕಿರಣದ ಪುಸ್ತಕ ಪ್ರಕಟಿಸಲಾಯಿತು. ಅನನ್ಯಾ ಕುಲಕರ್ಣಿ ವಚನಗೀತೆ, ಶ್ರೇಯಾ ಸಾಂಗವಾಡೆ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು. ಪ್ರೊ.ಬಿ.ಡಿ.ಧಾಮಣ್ಣವರ ಸ್ವಾಗತಿಸಿದರು. ಡಾ.ಎ.ಎಂ.ಜಕ್ಕಣ್ಣವರ ಪರಿಚಯಿಸಿದರು. ಪ್ರೊ.ವಿ.ಬಿ.ಬುರ್ಲೆ ಮತ್ತು ಪ್ರೊ.ಎನ್.ಎಂ.ಬಾಗೆವಾಡಿ ನಿರೂಪಿಸಿದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net