ಸಹಕಾರ ಕ್ಷೇತ್ರಕ್ಕೆ ಹೆಸರಾದ ಹುಕ್ಕೇರಿ

ಹುಕ್ಕೇರಿ ಮಹಾವೀರ ಶಿಕ್ಷಣ ಸಂಸ್ಥೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಶನಿವಾರ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮವನ್ನು ಮಹಾವೀರ ನಿಲಜಗಿ ಉದ್ಘಾಟಿಸಿದರು. ರೋಹಿತ ಚೌಗಲಾ, ಬಾಹುಬಲಿ ಸೊಲ್ಲಾಪುರೆ ಇತರರಿದ್ದರು.
ಹುಕ್ಕೇರಿ ಮಹಾವೀರ ಶಿಕ್ಷಣ ಸಂಸ್ಥೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಶನಿವಾರ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮವನ್ನು ಮಹಾವೀರ ನಿಲಜಗಿ ಉದ್ಘಾಟಿಸಿದರು. ರೋಹಿತ ಚೌಗಲಾ, ಬಾಹುಬಲಿ ಸೊಲ್ಲಾಪುರೆ ಇತರರಿದ್ದರು.
Published on
ಹುಕ್ಕೇರಿ: ಸಹಕಾರ ರಂಗದ ಮೂಲಕ ಎಲ್ಲ ಕ್ಷೇತ್ರಗಳ ಅಭಿವೃದ್ಧಿ ಸಾಧ್ಯ. ಹುಕ್ಕೇರಿ ತಾಲೂಕು ಸಹಕಾರ ಕ್ಷೇತ್ರಕ್ಕೆ ಹೆಸರಾಗಿದೆ. ಶಿಕ್ಷಣ, ಸಾರಿಗೆ, ಆರೋಗ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಸಹಕಾರ ತತ್ತ್ವ ಅಳವಡಿಕೆಯಾಗಿದೆ ಎಂದು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ ಹೇಳಿದರು.
ಮಹಾವೀರ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಜಿಲ್ಲಾ ಸಹಕಾರ ಯುನಿಯನ್, ಡಿಸಿಸಿ ಬ್ಯಾಂಕ್, ಹಾಲು ಉತ್ಪಾದಕರ ಸಂಘಗಳ ಒಕ್ಕೂಟ, ಯಶಸ್ವಿನಿ ಟ್ರಸ್ಟ್ ಮತ್ತು ಮಹಾವೀರ ಮಲ್ಟಿಪರ್ಪಜ್ ಸೌಹಾರ್ದ ಸಹಕಾರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಹಕಾರದಿಂದ ಸಮೃದ್ಧಿ ಎಂಬ ಧ್ಯೇಯ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಹಕಾರ ತತ್ತ್ವದಡಿ ವಿದ್ಯುತ್ ಸರಬರಾಜು ಮಾಡುವ ದೇಶದ ಏಕೈಕ ಸಂಸ್ಥೆ ಸೇರಿದಂತೆ ಹೀರಾ ಶುಗರ್ಸ್, ಜೆ.ಜಿ ಸಹಕಾರಿ ಆಸ್ಪತ್ರೆ ಹಲವಾರು ಸಹಕಾರ ಸಂಘಗಳು ನಾಡಿಗೆ ಹೆಸರು ತಂದಿವೆ ಎಂದರು.
ವಿವೇಕಾನಂದ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಶೋಕ ಪಾಟೀಲ ಮಾತನಾಡಿ, ರಾಷ್ಟ್ರದ ಬೆಳವಣಿಗೆಗೆ ಸಹಕಾರ ಕ್ಷೇತ್ರ ಪ್ರಾಮುಖ್ಯತೆ ಪಡೆದಿದೆ. ಸರ್ಕಾರಕ್ಕೆ ಸಮಾಂತರವಾಗಿ ಸಹಕಾರ ಕ್ಷೇತ್ರ ಜನರ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದರು.
ಸೌಹಾರ್ದ ಸಹಕಾರ ಸಂಸ್ಥೆ ಪ್ರಾಂತೀಯ ವ್ಯವಸ್ಥಾಪಕ ಬಸವರಾಜ ಹೊಂಗಲ ಮಾತನಾಡಿದರು.ಮಹಾವೀರ ಮಲ್ಟಿಪರ್ಪಸ್ ಸಹಕಾರ ಉಪಾಧ್ಯಕ್ಷ ರೋಹಿತ ಚೌಗಲಾ, ನಿರ್ದೇಶಕ ಬಾಹುಬಲಿ ಸೊಲ್ಲಾಪುರೆ, ಮಹಾವೀರ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಪ್ರಜ್ವಲ ನಿಲಜಗಿ, ಕಾರ್ಯದರ್ಶಿ ಸಂಜಯ ನಿಲಜಗಿ, ಪ್ರಭು ಅಪ್ಪನ್ನವರ, ರಾಜೇಂದ್ರ ಪಾಟೀಲ, ಸಂತೋಷಸಿಂಗ್ ರಜಪೂತ, ಪ್ರವೀಣ ಪಾಟೀಲ ಇತರರಿದ್ದರು. ಉಪನ್ಯಾಸಕ ವಿಶಾಲ ಮೆಕ್ಕಳಕಿ ಸ್ವಾಗತಿಸಿದರು. ಪ್ರಾಚಾರ್ಯ ಡಿ.ಎ.ಗುಬ್ಬಿ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net