ಗರ್ಭಕಂಠ ಕ್ಯಾನ್ಸರ್ ತಡೆಗೆ ಎಚ್‌ಪಿವಿ ಸಹಕಾರಿ

ಯಕ್ಕಂಚಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಎಚ್‌ಪಿವಿ ಲಸಿಕೆ ಕುರಿತು ಹಮ್ಮಿಕೊಂಡಿದ್ದ ಆರೋಗ್ಯ ಶಿಕ್ಷಣ ಕಾರ್ಯಕ್ರಮದಲ್ಲಿ ಡಾ.ಎಂ.ಬಿ.ಬಾಲಪ್ಪನವರ ಮಾತನಾಡಿದರು. ಮಹೇಶ ಕೊಪ್ಪದ, ಮಹಾದೇವಿ ಶಿಂಧೆ, ಕವಿತಾ ಕಿವಡಣ್ಣವರ, ರಾಜೇಶ್ವರಿ ತಿವಡಿ, ರಾಜೇಶ್ವರಿ ರೊಟ್ಟಿ ಇದ್ದರು.
ಯಕ್ಕಂಚಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಎಚ್‌ಪಿವಿ ಲಸಿಕೆ ಕುರಿತು ಹಮ್ಮಿಕೊಂಡಿದ್ದ ಆರೋಗ್ಯ ಶಿಕ್ಷಣ ಕಾರ್ಯಕ್ರಮದಲ್ಲಿ ಡಾ.ಎಂ.ಬಿ.ಬಾಲಪ್ಪನವರ ಮಾತನಾಡಿದರು. ಮಹೇಶ ಕೊಪ್ಪದ, ಮಹಾದೇವಿ ಶಿಂಧೆ, ಕವಿತಾ ಕಿವಡಣ್ಣವರ, ರಾಜೇಶ್ವರಿ ತಿವಡಿ, ರಾಜೇಶ್ವರಿ ರೊಟ್ಟಿ ಇದ್ದರು.
Published on
ಅಥಣಿ ಗ್ರಾಮೀಣ: ಹೆಣ್ಣುಮಕ್ಕಳಲ್ಲಿ ಕಂಡುಬರುವ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ತಪ್ಪದೇ ಎಚ್‌ಪಿವಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಅಡಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಎಂ.ಬಿ.ಬಾಲಪ್ಪನವರ ಸಲಹೆ ನೀಡಿದರು.
ಅಥಣಿ ತಾಲೂಕಿನ ಯಕ್ಕಂಚಿ ಗ್ರಾಮದ
ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಅಡಹಳ್ಳಿ ಪಿಎಚ್‌ಸಿ ಹಾಗೂ ಯಕ್ಕಂಚಿ ಪ್ರೌಢಶಾಲೆ
ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಶಿಕ್ಷಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, 14ರಿಂದ 15 ವರ್ಷದೊಳಗಿನ ಹೆಣ್ಣುಮಕ್ಕಳು ಈ ಲಸಿಕೆಯನ್ನು ತಪ್ಪದೇ ಹಾಕಿಸಿಕೊಳ್ಳಬೇಕು.
ಸೋಂಕು ತಡೆಯಲು ಲಸಿಕೆ ಪರಿಣಾಮಕಾರಿ ಆಗಿದ್ದು, ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಎಂಆರ್ ನಿರ್ಮೂಲನೆ ಹಾಗೂ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ನಿಟ್ಟಿನಲ್ಲಿ ಎಚ್‌ಪಿವಿ ಲಸಿಕೆ ಅಭಿಯಾನ ಕೈಗೊಳ್ಳಲಾಗಿದೆ. ಇದು ಯಾವುದೇ ಕಾರಣಕ್ಕೂ ಬಂಜೆತನ ಉಂಟು ಮಾಡುವುದಿಲ್ಲ. ಅಲ್ಲದೇ, ಯಾವುದೇ ರೀತಿ ಅಡ್ಡ ಪರಿಣಾಮ ಇರುವುದಿಲ್ಲ. ಎಲ್ಲ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಲಭ್ಯವಿದ್ದು. ಆತಂಕಪಡದೇ ಲಸಿಕೆ ಹಾಕಿಸಿಕೊಳ್ಳಬೇಕು ಎಂದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ ಕೊಪ್ಪದ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಆರೋಗ್ಯದ ಕಡೆ ಗಮನ ಹರಿಸಬೇಕು ಎಂದು ತಿಳಿಸಿದರು. ಮುಖ್ಯಶಿಕ್ಷಕಿ ರಾಜೇಶ್ವರಿ ರೊಟ್ಟಿ, ಹಿರಿಯ ಆರೋಗ್ಯ ಪ್ರಾಥಮಿಕ ಸಂರಕ್ಷಣಾಧಿಕಾರಿ ಮಹಾದೇವಿ ಶಿಂಧೆ, ಆಶಾ ಕಾರ್ಯಕರ್ತೆಯರಾದ
ಕವಿತಾ ಕಿವಡಣ್ಣವರ, ರಾಜೇಶ್ವರಿ ತಿವಡಿ, ಮಹಾದೇವ ಜಾಧವ, ಬಸವರಾಜ ನಂದಾ, ಬಾಳಾಸಾಬ ಕಾಂಬಳೆ, ಭೀರಪ್ಪ ಗೌಡಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net