ಇತಿಹಾಸ ಸಾರುವ ವಕ್ಕುಂದ

ವಕ್ಕುಂದ ಗ್ರಾಮದಲ್ಲಿ ತಿರುಳ್ಗನ್ನಡ ನಾಡು ಉತ್ಸವವನ್ನು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಉದ್ಘಾಟಿಸಿದರು. ಮಹಾಂತಯ್ಯಶಾಸಿ ಆರಾದ್ರಿಮಠ, ವೈ.ಎಂ.ಯಾಕೊಳ್ಳಿ, ರೋಹಿಣಿ ಪಾಟೀಲ ಇತರರಿದ್ದರು.
ವಕ್ಕುಂದ ಗ್ರಾಮದಲ್ಲಿ ತಿರುಳ್ಗನ್ನಡ ನಾಡು ಉತ್ಸವವನ್ನು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಉದ್ಘಾಟಿಸಿದರು. ಮಹಾಂತಯ್ಯಶಾಸಿ ಆರಾದ್ರಿಮಠ, ವೈ.ಎಂ.ಯಾಕೊಳ್ಳಿ, ರೋಹಿಣಿ ಪಾಟೀಲ ಇತರರಿದ್ದರು.
Published on
ತಾಲೂಕಿನ ವಕ್ಕುಂದ ಗ್ರಾಮದಲ್ಲಿ ಭಾನುವಾರ ತಿರುಳ್ಗನ್ನಡ ನಾಡು ಉತ್ಸವ-2026 ಉದ್ಘಾಟಿಸಿ ಮಾತನಾಡಿ, ಕಳೆದ 11 ವರ್ಷಗಳಿಂದ ಆಚರಿಸುತ್ತಿರುವ ತಿರುಳ್ಗನ್ನಡ ನಾಡು ವಕ್ಕುಂದ ಉತ್ಸವ ಮಾದರಿಯಾಗಿದೆ. ಆರಂಭದ 8 ವರ್ಷ ಗ್ರಾಮಸ್ಥರೇ ಸ್ವಂತ ಖರ್ಚಿನಲ್ಲಿ ಆಯೋಜಿಸಿದರೆ, ಎರಡು ವರ್ಷಗಳಿಂದ ಜಿಲ್ಲಾಡಳಿತ 2 ಲಕ್ಷ ರೂ. ಅನುದಾನ ನೀಡುತ್ತಿರುವುದು ಸಂತಸದ ಸಂಗತಿ. ಮುಂಬರುವ ವರ್ಷ ಎಲ್ಲರ ಬೇಡಿಕೆಯಂತೆ ಸರ್ಕಾರಿ ಉತ್ಸವವಾಗುವುದು ನಿಶ್ಚಿತ ಎಂದರು.
ಜಿಪಂ ಮಾಜಿ ಸದಸ್ಯೆ ರೋಹಿಣಿ ಪಾಟೀಲ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮೋಜು-ಮಸ್ತಿಯಲ್ಲೇ ಸಮಯ ವ್ಯರ್ಥ ಮಾಡುತ್ತಿದ್ದಾರೆ. ನಾಡಿನ ಮಹಾತ್ಮರು, ದಾರ್ಶನಿಕರ ಆದರ್ಶ ಮೈಗೂಡಿಸಿಕೊಂಡು ಮಾದರಿ ಬದುಕು ತಮ್ಮದಾಗಿಸಿಕೊಳ್ಳಬೇಕು ಎಂದರು.
ಸಾಂಸ್ಕೃತಿಕ ಕಾರ್ಯಕ್ರಮ ನೀಡಿದವು. ಶ್ರೀರಕ್ಷಾ ಜೋಶಿ ಭರತನಾಟ್ಯ ಪ್ರದರ್ಶಿಸಿದರು.
ಗ್ರಾಪಂ ಅಧ್ಯಕ್ಷೆ ನಿರ್ಮಲಾ ಕಲ್ಲಿ ಅಧ್ಯಕ್ಷತೆ ವಹಿಸಿದ್ದರು. ಮಹಾಂತಯ್ಯಶಾಸಿ ಆರಾದ್ರಿಮಠ, ಕಸಾಪ ತಾಲೂಕಾಧ್ಯಕ್ಷ ಎನ್.ಆರ್.ಠಕ್ಕಾಯಿ, ಪಿಡಿಒ ಬಸನಗೌಡ ಪಾಟೀಲ, ಉತ್ಸವ ಸಮಿತಿ ಗೌರವಾಧ್ಯಕ್ಷ ಸಿ.ಕೆ.ಮೆಕ್ಕೇದ, ಸಲಹಾ ಸಮಿತಿ ಅಧ್ಯಕ್ಷ ಸಿ.ಬಿ.ಗಣಾಚಾರಿ, ಉತ್ಸವ ಸಮಿತಿ ಅಧ್ಯಕ್ಷ ರಾಮನಗೌಡ ಪಾಟೀಲ, ಉಪಾಧ್ಯಕ್ಷ ಸಂಗಪ್ಪ ಭದ್ರಶೆಟ್ಟಿ,ಅಶೋಕ ಭದ್ರಶೆಟ್ಟಿ, ಪರ್ವತಗೌಡ ಪಾಟೀಲ,
ಮಡಿವಾಳಪ್ಪ ತಡಸಲ, ಶಂಕರ ಕೋಟಗಿ, ಅಶೋಕ ಜಂತಿ, ಈರಣ್ಣ ಅಂಗಡಿ, ಈರನಗೌಡ ಶೀಲವಂತರ, ರಮೇಶ ಹಾದಿಮನಿ, ಮೌನೇಶ ಪತ್ತಾರ, ಸಂತೋಷ ಹಡಪದ, ಮೈಲಾರಪ್ಪ ಢವಳೆ, ಮಲ್ಲವ್ವ ಪಟಾತ ಇತರರಿದ್ದರು. ಉತ್ಸವ ಸಮಿತಿ ನಿರ್ದೇಶಕ ಜಿ.ಎಂ.ಸುತಗಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಗಂಗಾಧರಗೌಡ ಪಾಟೀಲ ನಿರೂಪಿಸಿದರು. ಪತ್ರಕರ್ತ ಸಿದ್ಧನಗೌಡ ಪಾಟೀಲ ಸ್ವಾಗತಿಸಿದರು. ಉತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಬಸನಗೌಡ ಪೊಲೀಸ್‌ಪಾಟೀಲ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net