ವಿದ್ಯುತ್ ಸಹಕಾರಿಯ ಏಳಿಗೆಗೆ ನೆರವಾಗಿ

ಬಿದರೆವಾಡಿ ಗ್ರಾಮದಲ್ಲಿ ಟಿಸಿ ಉದ್ಘಾಟನೆ ಸಮಾರಂಭದಲ್ಲಿ ರಮೇಶ ಕತ್ತಿ, ಬಸವರಾಜ ಹುಂದ್ರಿ, ಮಾರುತಿ ಅಷ್ಟಗಿ, ವಿನಯಗೌಡ ಪಾಟೀಲ ಇತರರಿದ್ದರು.
ಬಿದರೆವಾಡಿ ಗ್ರಾಮದಲ್ಲಿ ಟಿಸಿ ಉದ್ಘಾಟನೆ ಸಮಾರಂಭದಲ್ಲಿ ರಮೇಶ ಕತ್ತಿ, ಬಸವರಾಜ ಹುಂದ್ರಿ, ಮಾರುತಿ ಅಷ್ಟಗಿ, ವಿನಯಗೌಡ ಪಾಟೀಲ ಇತರರಿದ್ದರು.
Published on
ಉಳ್ಳಾಗಡ್ಡಿ-ಖಾನಾಪುರ: ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಪ್ರಗತಿಗೆ ಎಲ್ಲರೂ ಸಹಕರಿಸಬೇಕು ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.
ಸಮೀಪದ ಗುಡಗನಟ್ಟಿ, ಕೋಟ ಮತ್ತು ಬಿದರೆವಾಡಿ ಗ್ರಾಮದಲ್ಲಿ ಶುಕ್ರವಾರ 63 ಕೆವಿಯ ತಲಾ 1 ಟಿಸಿ ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ನೇರವಾಗಿ ಸಂಪರ್ಕಿಸಿದೆ ಕೆಲಸ ಮಾಡಿಕೊಡುತ್ತೇನೆ. ಸಂಘದ ಆಡಳಿತ ಮಂಡಳಿ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿ ಅಗತ್ಯ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಸವರಾಜ ಹುಂದ್ರಿ, ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಂಘದ ನಿರ್ದೇಶಕ ವಿನಯಗೌಡ ಪಾಟೀ, ಮಾರುತಿ ಅಷ್ಟಗಿ, ನಂದು ಮುಡಸಿ, ಬಸವರಾಜ ಮುಂಗರವಾಡಿ, ಕಾಕಾ ಬಾಂದುರ್ಗೆ, ಅವಿನಾಶ ಪಾಟೀಲ, ರಾಹುಲ ಮುಂಗರವಾಡಿ, ಮಾರುತಿ ನಾರ್ವೇಕರ, ಜನಾದರ್ನ ಪಾಟೀಲ, ರುದ್ರಪ್ಪ ರುದ್ರಾಪುರಿ, ಶಾಖಾಧಿಕಾರಿ ನಿರಂಜನ ಮಗದುಮ್ಮ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net