ಸಿಲಿಂಡರ್ ಬೆಲೆ ಏರಿಕೆಗೆ ಹೆಬ್ಬಾಳ್ಕರ್ ಆಕ್ರೋಶ

ಲಕ್ಷ್ಮೀ  ಹೆಬ್ಬಾಳ್ಕರ್
ಲಕ್ಷ್ಮೀ ಹೆಬ್ಬಾಳ್ಕರ್
Published on
ಬೆಳಗಾವಿ: ವಾಣಿಜ್ಯ ಬಳಕೆ ಗ್ಯಾಸ್ ಸಿಲಿಂಡರ್ ದರವನ್ನು ರೂ.2,162ರಿಂದ 3,153ರೂಗೆ ಏರಿಸಿರುವ ಮೂಲಕ ಏಕಕಾಲಕ್ಕೆ 991ರೂ. ಏರಿಕೆ ಮಾಡುವ ಮೂಳಕ ಕೇಂದ್ರ ಸರ್ಕಾರದ ಜನವಿರೋಧಿ ನಿರ್ಧಾರ ಕೈಗೊಂಡಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ಪ್ರಮಾಣದ ಬೆಲೆ ಏರಿಕೆ ಹಿಂದೆಂದೂ ಕಂಡಿಲ್ಲ. ಕೆಲವು ರಾಜ್ಯಗಳ ಚುನಾವಣೆ ಮುಗಿದ ತಕ್ಷಣ ಇಂತಹ ಜನವಿರೋಧಿ ನಿರ್ಧಾರ ತೆಗೆದುಕೊಂಡಿರುವುದು ಜನರಿಗೆ ನೀಡಿದ ಭರವಸೆಗಳನ್ನೇ ಮರೆತಂತಾಗಿದೆ. ಇದು ನೇರವಾಗಿ ಹೊಟೇಲ್ ಉದ್ಯಮದ ಮೇಲೆ ಹಾಗೂ ಸಾಮಾನ್ಯ ಜನರ ಬದುಕಿನ ಮೇಲೆ ಗದಾಪ್ರಹಾರವಾಗಿದೆ ಎಂದಿದ್ದಾರೆ.
ಹೋಟೆಲ್ ಮಾಲೀಕರು ಈಗಾಗಲೇ ಬೆಲೆ ಏರಿಕೆಯ ಒತ್ತಡ ಎದುರಿಸುತ್ತಿದ್ದಾರೆ. ಈ ನಿರ್ಧಾರದಿಂದ ಆಹಾರ ಪದಾರ್ಥಗಳ ಬೆಲೆ ಮತ್ತಷ್ಟು ಏರಿಕೆಯಾಗಲಿದೆ. ಅದರ ಪರಿಣಾಮವಾಗಿ ದಿನನಿತ್ಯ ಜೀವನ ನಡೆಸುವ ಸಾಮಾನ್ಯ ಜನರು ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೇಂದ್ರ ಸರ್ಕಾರ ಜನರ ಜೀವನೋಪಾಯವನ್ನು ಕಷ್ಟಕರಗೊಳಿಸುವ ಬದಲು, ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ತಕ್ಷಣವೇ ಈ ಅನ್ಯಾಯಕರ ಬೆಲೆ ಏರಿಕೆಯನ್ನು ಹಿಂಪಡೆಯಬೇಕು ಹಾಗೂ ಜನಪರ ನೀತಿಗಳನ್ನು ಅನುಸರಿಸಬೇಕು ಎಂದು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net