ಉಳ್ಳಾಗಡ್ಡಿ ಖಾನಾಪುರ ಪಟ್ಟಣದಲ್ಲಿ ಮಳೆ ಗಾಳಿಯ ರಭಸಕ್ಕೆ ಸರ್ಕಾರಿ ಹೆಣ್ಣು ಮಕ್ಕಳ ಶಾಲೆ ಹಾಗೂ ಉರ್ದು ಶಾಲೆಗಳ ತಗಡಿನ ಸೀಟ್ ಹಾರಿ ಹೋಗಿವೆ.
Published on:
Copied
Follow Us
ಬೆಳಗಾವಿ: ನಗರ, ಬೈಲಹೊಂಗಲ, ಗೋಕಾಕ, ಚನ್ನಮ್ಮನ ಕಿತ್ತೂರು, ಚಿಕ್ಕೋಡಿ, ಬೆಳಗಾವಿ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಭಾನುವಾರ ಗುಡುಗು, ಮಿಂಚು ಸಹಿತ ಭಾರಿ ಮಳೆ ಸುರಿದಿದೆ.
ಎಂ.ಕೆ.ಹುಬ್ಬಳ್ಳಿ, ಮಮದಾಪುರ, ಉಳ್ಳಾಗಡ್ಡಿ ಖಾನಾಪುರದಲ್ಲಿ ಭಾರಿ ಮಳೆಯಾಗಿದೆ. ಉಳ್ಳಾಗಡ್ಡಿ ಖಾನಾಪುರ ಪಟ್ಟಣದಲ್ಲಿ ಮಳೆ ಗಾಳಿಯ ರಭಸಕ್ಕೆ ಸರ್ಕಾರಿ ಹೆಣ್ಣು ಮಕ್ಕಳ ಶಾಲೆ ಹಾಗೂ ಉರ್ದು ಶಾಲೆಗಳ ತಗಡಿನ ಸೀಟ್ ಹಾರಿ ಹೋಗಿವೆ. ಮುಖ್ಯ ರಸ್ತೆಯಲ್ಲಿರುವ ಕಟಿಂಗ್ ಶಾಪ್ ಹಾಳಾಗಿದೆ.
ಹೊರ ವಲಯದಲ್ಲಿರುವ ಗಿಡ, ಮರಗಳು, ವಿದ್ಯುತ್ ಕಂಬಗಳು ಬಿದ್ದಿವೆ. ಇದರಿಂದ ಗ್ರಾಮದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.