ಬೋರಗಾಂವ: ಬೋರಗಾಂವ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಂಘದ ವತಿಯಿಂದ ವಿವಿಧ ಯೋಜನೆ ರೂಪಿಸಲಾಗುತ್ತಿದೆ. ರೈತ ಸದಸ್ಯರ ಆರ್ಥಿಕ ಅಭಿವೃದ್ಧಿ ಸಂಘದ ಗುರಿಯಾಗಿದೆ ಎಂದು ಯುವ ಮುಖಂಡ ಉತ್ತಮ ಪಾಟೀಲ ಹೇಳಿದರು.
ಪಟ್ಟಣದ ಪಿಕೆಪಿಎಸ್ ಸಂಘದ ಸದಸ್ಯರಾದ ಶಿವಲಿಂಗ ಐದಮಾಳೆ ಮತ್ತು ಮಹಾದೇವ ಮಡಿವಾಳ ಇತ್ತೀಚೆಗೆ ನಿಧನರಾದ ಹಿನ್ನಲೆಯಲ್ಲಿ ಆರೋಗ್ಯ ವಿಮಾ ಯೋಜನೆಯಿಂದ ಅವರ ವಾರುಸುದಾರರಿಗೆ ತಲಾ 1 ಲಕ್ಷ ರೂ. ಚೆಕ್ ವಿತರಿಸಿ ಮಾತನಾಡಿ, ಇದುವರೆಗೆ 9 ಮೃತರ ವಾರಸುದಾರರಿಗೆ ವಿಮಾ ಕಂಪನಿ ಯೋಜನೆಯಡಿ ಒಂದು ಲಕ್ಷ ರೂ. ವಿತರಿಸಲಾಗಿದೆ ಎಂದರು.
ಸಂಘದ ಉಪಾಧ್ಯಕ್ಷ ಸುಮೀತ ರೊಡ್ಡ, ನಿರ್ದೇಶಕ ಪ್ರದೀಪ ಮಾಳಿ, ರಾಜೇಂದ್ರ ಪಾಟೀಲ, ರಾಜೇಂದ್ರ ಐದಮಾಳೆ, ಸುರೇಶ ಬಂಕಾಪುರೆ, ಪ್ರವೀಣ ಪಾಟೀಲ, ದರ್ಶನ ಪಾಟೀಲ, ರಾಜು ಗಜರೆ, ಸಿಇಒ ಆರ್.ಟಿ.ಚೌಗುಲಾ, ರಾಕೇಶ ಫಿರಗನ್ನವರ ಇತರರಿದ್ದರು.