ಪುರಸಭೆಗೆ ಜ್ಞಾನೇಶ್ವರ ಧರ್ಮಟ್ಟಿ ಅಧ್ಯಕ್ಷ

ಹಾರೂಗೇರಿ ಪುರಸಭೆ ಅಧ್ಯಕ್ಷರಾಗಿ ಜ್ಞಾನೇಶ್ವರ ಧರ್ಮಟ್ಟಿ ಆಯ್ಕೆಯಾದ ಹಿನ್ನೆಲೆಯಲ್ಲಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಮಾಜಿ ಶಾಸಕ ಪಿ.ರಾಜೀವ, ಶ್ರೀಧರ ಮೂಡಲಗಿ, ಬ್ರಹ್ಮದೇವ ಹಳ್ಳೂರ, ಕುಮಾರ ಬನಶಂಕರಿ ಇತರರಿದ್ದರು.
ಹಾರೂಗೇರಿ ಪುರಸಭೆ ಅಧ್ಯಕ್ಷರಾಗಿ ಜ್ಞಾನೇಶ್ವರ ಧರ್ಮಟ್ಟಿ ಆಯ್ಕೆಯಾದ ಹಿನ್ನೆಲೆಯಲ್ಲಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಮಾಜಿ ಶಾಸಕ ಪಿ.ರಾಜೀವ, ಶ್ರೀಧರ ಮೂಡಲಗಿ, ಬ್ರಹ್ಮದೇವ ಹಳ್ಳೂರ, ಕುಮಾರ ಬನಶಂಕರಿ ಇತರರಿದ್ದರು.
Published on
ಹಾರೂಗೇರಿ: ವಸಂತ ಲಾಳಿ ರಾಜೀನಾಮೆಯಿಂದ ತೆರವಾಗಿದ್ದ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಜ್ಞಾನೇಶ್ವರ ಧರ್ಮಟ್ಟಿ ಒಬ್ಬರೆ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಹಸೀಲ್ದಾರ್ ಸದಾಶಿವ ಸನಮುರಿ ಮಂಗಳವಾರ ಘೋಷಿಸಿದರು.
ಮಾಜಿ ಶಾಸಕ ಪಿ.ರಾಜೀವ ಮಾತನಾಡಿ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಗುಣ ಬೆಳೆಸಿಕೊಂಡು ಜನಪರ ಆಡಳಿತ ನೀಡುವಂತೆ ಸಲಹೆ ನೀಡಿದರು.
ಅಧ್ಯಕ್ಷರ ಆಯ್ಕೆಯಾಗುತ್ತಿದ್ದಂತೆ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಜೈಕಾರ ಹಾಕಿ, ಪಟಾಕಿ ಸಿಡಿಸಿ, ಗುಲಾಲ ಎರಚಿ ಸಂಭ್ರಮಿಸಿದರು. ಬಳಿಕ ಪಾದಯಾತ್ರೆ ಮೂಲಕ ಚನ್ನವೃಷಭೇಂದ್ರ ಲೀಲಾಮಠಕ್ಕೆ ತೆರಳಿ ದೇವರಕೊಂಡ ಅಜ್ಜನ ಕರ್ತೃ ಗದ್ದುಗೆಯ ಆಶೀರ್ವಾದ ಪಡೆದುಕೊಂಡರು.
ಪುರಸಭೆ ಮುಖ್ಯಾಧಿಕಾರಿ ಬಸವರಾಜ ಮನಗೂಳಿ, ಶ್ರೀಧರ ಮೂಡಲಗಿ, ಬ್ರಹ್ಮದೇವ ಹಳ್ಳೂರ, ಕುಮಾರ ಬನಶಂಕರಿ, ಶಶಿಧರ ಶಿಂಗೆ, ದಿವಾಕರ ಧರ್ಮಟ್ಟಿ, ರಾಜು ಅಸ್ಕಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net