ಗುರುಸಿದ್ಧ ಶ್ರೀ ಪಲ್ಲಕ್ಕಿ ಉತ್ಸವ ಅದ್ದೂರಿ

ಯಮಕನಮರಡಿಯಲ್ಲಿ ಹಮ್ಮಿಕೊಂಡಿದ್ದ ಲಿಂ.ಗುರುಸಿದ್ಧ ಸ್ವಾಮೀಜಿ ಪಲ್ಲಕ್ಕಿ ಉತ್ಸವ ಜರುಗಿತು. ಕಿರಣಸಿಂಗ ರಜಪೂತ, ಈರಣ್ಣ ಬಿಸಿರೊಟ್ಟಿ, ಗಿರೀಶ ಮಿಶ್ರಕೋಟೆ ಇತರರಿದ್ದರು.
ಯಮಕನಮರಡಿಯಲ್ಲಿ ಹಮ್ಮಿಕೊಂಡಿದ್ದ ಲಿಂ.ಗುರುಸಿದ್ಧ ಸ್ವಾಮೀಜಿ ಪಲ್ಲಕ್ಕಿ ಉತ್ಸವ ಜರುಗಿತು. ಕಿರಣಸಿಂಗ ರಜಪೂತ, ಈರಣ್ಣ ಬಿಸಿರೊಟ್ಟಿ, ಗಿರೀಶ ಮಿಶ್ರಕೋಟೆ ಇತರರಿದ್ದರು.
Published on
ಉಳ್ಳಾಗಡ್ಡಿ-ಖಾನಾಪುರ: ಧಾರ್ಮಿಕ-ಆಧ್ಯಾತ್ಮಿಕ ಕಾರ್ಯಕ್ರಮ ಹಮ್ಮಿಕೊಂಡು ಹಲವಾರು ಜನರ ಕಷ್ಟಗಳನ್ನು ನಿವಾರಿಸುವ ಅದ್ಭುತ ಶಕ್ತಿ ಲಿಂ.ಗುರುಸಿದ್ಧ ಸ್ವಾಮೀಜಿ ಅವರಲ್ಲಿತ್ತು ಎಂದು ಹುಣಸಿಕೊಳ್ಳಮಠದ ಪೀಠಾಧೀಶ ರಾಚೋಟಿ ಸ್ವಾಮೀಜಿ ಹೇಳಿದರು.
ಸಮೀಪದ ಯಮಕನಮರಡಿಯ ಹುಣಸಿಕೊಳ್ಳಮಠದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಲಿಂ.ಗುರುಸಿದ್ಧ ಸ್ವಾಮೀಜಿ 32ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಲಿಂ.ಗುರುಸಿದ್ಧ ಸ್ವಾಮೀಜಿ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ನಡೆಯಿತು. ಸಿದ್ಧಬಸವ ದೇವರು ಮಾತನಾಡಿದರು. ಕಿರಣಸಿಂಗ ರಜಪೂತ, ಈರಣ್ಣ ಬಿಸಿರೊಟ್ಟಿ, ಗಿರೀಶ ಮಿಶ್ರಕೋಟೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net