ಶಿಕ್ಷಕರ ಸಂಘಕ್ಕೆ ಗುರುರಾಜ ಅಧ್ಯಕ್ಷ

ಬೈಲಹೊಂಗಲ ನಗರದಲ್ಲಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಶಿವರಂಜನ ಬೋಳನ್ನವರ, ಗುರುರಾಜ ಬೋಳನ್ನವರ, ಪ್ರಕಾಶ ಪಾಟೀಲ, ಮಂಜುಳಾ ಶೆಟ್ಟರ ಇತರರಿದ್ದರು.
ಬೈಲಹೊಂಗಲ ನಗರದಲ್ಲಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಶಿವರಂಜನ ಬೋಳನ್ನವರ, ಗುರುರಾಜ ಬೋಳನ್ನವರ, ಪ್ರಕಾಶ ಪಾಟೀಲ, ಮಂಜುಳಾ ಶೆಟ್ಟರ ಇತರರಿದ್ದರು.
Published on
ಬೈಲಹೊಂಗಲ:
ಸಂಘದ ಅಧ್ಯಕ್ಷರಾಗಿ ಗುರುರಾಜ ಬೋಳನ್ನವರ, ಗೌರವಾಧ್ಯಕ್ಷರಾಗಿ ಪ್ರಕಾಶ ಪಾಟೀಲ, ಉಪಾಧ್ಯಕ್ಷರಾಗಿ ರಮೇಶಗೌಡ ದೊಡಗೌಡರ, ಮಹಿಳಾ ಉಪಾಧ್ಯಕ್ಷರಾಗಿ ಮಂಜುಳಾ ಶೆಟ್ಟರ, ಪ್ರಧಾನ ಕಾರ್ಯದರ್ಶಿಯಾಗಿ ಅರ್ಜುನ ಕೋಣಿನವರ, ಕೋಶಾಧ್ಯಕ್ಷರಾಗಿ ಮಹಾಂತೇಶ ಮುರಗೋಡ, ಮಹಿಳಾ ಸಹ ಕಾರ್ಯದರ್ಶಿಯಾಗಿ ರೋಷನಬಿ ಮಕಾನದಾರ, ಸಂಘಟನಾ ಕಾರ್ಯದರ್ಶಿಗಳಾಗಿ ಪುಂಡಲೀಕ ನಿಕ್ಕಮ್ಮನವರ ಹಾಗೂ ನಾಗವೇಣಿ ತಳವಾರ, ನಿರ್ದೇಶಕರಾಗಿ ದಮಯಂತಿ ಪಾಟೀಲ, ಪ್ರಕಾಶ ನಾಯ್ಕರ, ವಿಠ್ಠಲ ಹುಣಶೀಕಟ್ಟಿ, ಆಶಾ ಬಾಳಿಗಟ್ಟಿ, ದುಂಡಪ್ಪ ಹಲಕಿ ಹಾಗೂ ಮಲ್ಲಿಕಾರ್ಜುನ ಹಾರೂಗೊಪ್ಪ ಆಯ್ಕೆಯಾದರು.
ಚಿತ್ರನಟ ಶಿವರಂಜನ ಬೋಳನ್ನವರ ಮಾತನಾಡಿ, ಶಿಕ್ಷಕರ ಸಂಘ ಶಿಕ್ಷಕರ ಹಿತಾಸಕ್ತಿ ಕಾಪಾಡುವ ಬಲಿಷ್ಠ ವೇದಿಕೆಯಾಗಬೇಕು. ನೂತನ ಪದಾಧಿಕಾರಿಗಳು ಹಿರಿಯ ಹಾಗೂ ಕಿರಿಯ ಶಿಕ್ಷಕರೊಂದಿಗೆ ಸಮನ್ವಯ ಸಾಧಿಸಿ ಸಂಘದ ಅಭಿವೃದ್ಧಿ ಹಾಗೂ ಶಿಕ್ಷಕರ ಸಮಸ್ಯೆ ನಿವಾರಣೆಗೆ ಶ್ರಮಿಸಬೇಕು ಎಂದರು.
ಸಂಘದ ಅಧ್ಯಕ್ಷ ಗುರುರಾಜ ಬೋಳನ್ನವರ ಮಾತನಾಡಿ, ಸ್ಥಗಿತಗೊಂಡಿರುವ ಗುರುಭವನ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು.
ಪುರಸಭೆ ಮಾಜಿ ಉಪಾಧ್ಯಕ್ಷ ಮಹಾಂತೇಶ ತುರಮರಿ, ಶಿಕ್ಷಕರು, ಸಂಘದ ಸದಸ್ಯರು ಹಾಗೂ ಗಣ್ಯರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net