ಬೆಳಗಾವಿ ಮಹಾನಗರ ಸೇರಿ ಖಾನಾಪುರ, ಅಥಣಿ, ಕಾಗವಾಡ, ಚಿಕ್ಕೋಡಿ, ರಾಯಬಾಗ, ಸವದತ್ತಿ, ಗೋಕಾಕ, ಮೂಡಲಗಿ, ರಾಮದುರ್ಗ, ಬೈಲಹೊಂಗಲ ತಾಲೂಕಿನ ತೋಟಪಟ್ಟಿಗಳು ಹಾಗ ಕಾಡಂಚಿನ ಗ್ರಾಮಗಳ ಶಾಲೆಗಳ ಮಕ್ಕಳು ಶಿಕ್ಷಕರ ಕೊರತೆಯಿಂದ ಹೆಚ್ಚಿನ ಸಮಸ್ಯೆ ಎದುರಿಸುತ್ತಿವೆ..ಈ ಭಾಗದ ಶಾಲೆಗಳಲ್ಲಿ ಒಬ್ಬೊಬ್ಬ ಶಿಕ್ಷಕರಿಗೆ ಹೆಚ್ಚುವರಿಯಾಗಿ 2 ರಿಂದ 3 ತರಗತಿಗಳ ಜವಾಬ್ದಾರಿ ನೀಡಲಾಗುತ್ತಿದೆ. ಇದು ಮಕ್ಕಳ ಗುಣಮಟ್ಟದ ಕಲಿಕೆಯ ಮೇಲೆ ಕೆಟ್ಟ ಪರಿಣಾಮ ಉಂಟು ಮಾಡಿದೆ. ಸುಮಾರು 800 ಪ್ರೌಢ ಶಾಲೆಗಳಲ್ಲಿ ವಿಷಯವಾರು ಕಾಯಂ ಶಿಕ್ಷಕರು ಇಲ್ಲ. ಇಂಗ್ಲೀಷ್, ವಿಜ್ಞಾನ ವಿಷಯ ಹೇಳುವ ಶಿಕ್ಷಕರು ಸಮಾಜ ವಿಜ್ಞಾನ, ಕನ್ನಡ, ಗಣಿತ ವಿಷಯಗಳನ್ನು ಹೇಳುವ ಸ್ಥಿತಿ ಇದೆ ಎಂದು ಎಸ್‌ಡಿಎಂಸಿ ಸದಸ್ಯರು, ಪಾಲಕರು ದೂರಿದ್ದಾರೆ.