ಆರ್‌ಪಿಎಫ್ ಪಡೆಯ ಭರ್ಜರಿ ಕಾರ್ಯಚರಣೆ

 ನೈಋತ್ಯ ರೈಲ್ವೆಯ ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿ ಗಾಂಜಾ ವಶಪಡಿಸಿಕೊಂಡಿದ್ದಾರೆ.
ನೈಋತ್ಯ ರೈಲ್ವೆಯ ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿ ಗಾಂಜಾ ವಶಪಡಿಸಿಕೊಂಡಿದ್ದಾರೆ.
Published on
ಬೆಳಗಾವಿ :ರೈಲ್ವೆ ಪ್ರಯಾಣಿಕರ ಸುರಕ್ಷತೆ, ಭದ್ರತೆ ಹಾಗೂ ರೈಲ್ವೆ ಆಸ್ತಿಗಳ ರಕ್ಷಣೆ ಕಾರ್ಯಚರಣೆ ಮುಂದುವರಿಸಿರುವ ನೈಋತ್ಯ ರೈಲ್ವೆಯ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಒಂದೇ ತಿಂಗಳಿನಲ್ಲಿ 67 ಮಕ್ಕಳನ್ನು ರಕ್ಷಿಸಿ 1 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ಮೇರಿ ಸಹೇಲಿ ಉಪಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿರುವ ಆರ್‌ಪಿಎಫ್‌ವಿವಿಧ ಕಾರಣಗಳಿಂದ ಕುಟುಂಬಗಳಿಂದ ಬೇರ್ಪಟ್ಟಿದ್ದ 67 ಮಕ್ಕಳನ್ನು (55 ಹುಡುಗರು ಹಾಗೂ 12 ಹುಡುಗಿಯರು) ರಕ್ಷಿಸಿ, ಅವರ ಕುಟುಂಬಸ್ಥರು ಅಥವಾ ಸಂಬಂಧಿತ ಎನ್‌ಜಿಒಗಳಿಗೆ ಹಸ್ತಾಂತರಿಸಲಾಗಿದೆ. ಇದೇ ವೇಳೆ ಆಪರೇಷನ ಡಿಗ್ನಿಟಿ ಅಡಿಯಲ್ಲಿ ಮೂವರು ವೃದ್ಧರನ್ನು ರಕ್ಷಿಸಿ ಸುರಕ್ಷಿತವಾಗಿ ಕುಟುಂಬಗಳಿಗೆ ಒಪ್ಪಿಸಿದೆ.
ರೈಲ್ವೆ ಟಿಕೆಟ್ ಕಾಳಸಂತೆ ತಡೆಗಟ್ಟುವ ಉಪಲಬ್ದ್ ಕಾರ್ಯಾಚರಣೆಯಡಿ ಕರ್ನಾಟಕ ಹಾಗೂ ಗೋವಾ ರಾಜ್ಯಗಳಲ್ಲಿ ದಾಳಿ ನಡೆಸಿ, 17ಜನರ‌್ನು ಬಂಧಿಸಿ 2.43 ಲಕ್ಷ ರೂ.ಮೌಲ್ಯದ ಟಿಕೆಟ್, ಆಪರೇಷನ್ ನಾರ್ಕೊ ಅಡಿಯಲ್ಲಿ 5 ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಿ 61.42 ಲಕ್ಷ ರೂ.ಮೌಲ್ಯದ 98.99 ಕೆಜಿ ಗಾಂಜಾ ಹಾಗೂ 18,440 ರೂ.ಮೌಲ್ಯದ 77 ಮದ್ಯದ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಯಾಣಿಕರು ಕಳೆದುಕೊಂಡ ಲ್ಯಾಪ್‌ಟಾಪ್, ಮೊಬೈಲ್, ಆಭರಣ ಸೇರಿದಂತೆ 36.62 ಲಕ್ಷ ರೂ.ಮೌಲ್ಯದ ವಸ್ತುಗಳನ್ನು 65 ಪ್ರಕರಣಗಳಲ್ಲಿ ಪತ್ತೆಹಚ್ಚಿ ವಾರಸುದಾರರಿಗೆ ಹಿಂತಿರುಗಿಸಲಾಗಿದೆ. ರೈಲ್ವೆ ಆಸ್ತಿ ಕಳವು ಪ್ರಕರಣಗಳಲ್ಲಿ 14 ಪ್ರಕರಣ ದಾಖಲಿಸಿ 7 ಮಂದಿಯನ್ನು ಬಂಧಿಸಿ 1.70 ಲಕ್ಷ ರೂ.ಮೌಲ್ಯದ ಕಳುವಾದ ರೈಲ್ವೆ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ. ಕಲ್ಲು ತೂರುವ ಪ್ರಕರಣಗಳ ಅಡಿಯಲ್ಲಿ 4 ಮಂದಿಯನ್ನು ಬಂಧಿಸಲಾಗಿದೆ. ಪ್ರತಿದಿನ 36 ರಿಂದ 40 ಎಕ್ಸ್‌ಪ್ರೆಸ್ ಹಾಗೂ ವಿಶೇಷ ರೈಲುಗಳಿಗೆ 125ರಿಂದ 130 ಆರ್‌ಪಿಎಫ್ ಸಿಬ್ಬಂದಿ ಭದ್ರತಾ ಬೆಂಗಾವಲು ನೀಡಲಾಗುತ್ತಿದೆ ಎಂದು ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಪಿ. ಅನಂತ್ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net