ದೇವಸ್ಥಾನ ಜೀರ್ಣೋದ್ಧಾರಕ್ಕೆ ಅನುದಾನ

ಗುಡಸ ಗಾಯರಾಣಾ ಜಮೀನಿನ ಸಮಸ್ಯೆ ಕುರಿತು ಶಾಸಕ ನಿಖಿಲ ಕತ್ತಿ ಚರ್ಚಿಸಿದರು. ಸತ್ಯಪ್ಪ ನಾಯಿಕ, ಗುರು ಕುಲಕರ್ಣಿ, ರಾಯಪ್ಪ ಡೂಗ ಇತರರಿದ್ದರು.
ಗುಡಸ ಗಾಯರಾಣಾ ಜಮೀನಿನ ಸಮಸ್ಯೆ ಕುರಿತು ಶಾಸಕ ನಿಖಿಲ ಕತ್ತಿ ಚರ್ಚಿಸಿದರು. ಸತ್ಯಪ್ಪ ನಾಯಿಕ, ಗುರು ಕುಲಕರ್ಣಿ, ರಾಯಪ್ಪ ಡೂಗ ಇತರರಿದ್ದರು.
Published on
ಹುಕ್ಕೇರಿ: ಗಾಯರಾಣ ಜಾಗ ಗ್ರಾಮಸ್ಥರ ಜಾನುವಾರು ಹಾಗೂ ಕುರಿ, ಆಡುಗಳ ಮೇವಿಗಾಗಿ ಮೀಸಲಿಟ್ಟಿರುವ ಪ್ರದೇಶ ಆಗಿರುತ್ತದೆ. ಅಲ್ಲಿ ಉಳುಮೆ ಮಾಡಿ ಪ್ರದೇಶ ನಮ್ಮದು ಎನ್ನುವುದು ತಪ್ಪು ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.
ಪಿಕಾರ್ಡ್ ಬ್ಯಾಂಕ್ ಆವರಣದಲ್ಲಿ ಸೋಮವಾರ ಕುಂದು-ಕೊರತೆ ಆಲಿಸಿ ಮಾತನಾಡಿ, ಸರ್ಕಾರ ಅಕ್ರಮ-ಸಕ್ರಮ ಸಮಿತಿ ರಚಿಸಿದ್ದರೂ ಅದಕ್ಕೆ ಯಾವುದೇ ನಿರ್ಣಯ ತೆಗೆದುಕೊಳ್ಳಲು ತಿಳಿಸಿಲ್ಲ. ಅದಕ್ಕಾಗಿ ಕುರಿಗಾಹಿಗಳು ಮತ್ತು ಗಾಯರಾಣಾ ಜಮೀನು ಸಾಗುವಳಿ ಮಾಡಿದವರು ಸಹಕರಿಸಬೇಕು ಎಂದು ಸೂಚಿಸಿದರು. ಹಿಡಕಲ್ಲ ಜಲಾಶಯದಲ್ಲಿ ಕೇವಲ 19 ಟಿಎಂಸಿ ನೀರು ಸಂಗ್ರಹವಾಗಿದೆ. ಲಭ್ಯವಿರುವ ನೀರನ್ನು ಜನ-ಜಾನುವಾರುಗಳಿಗೆ ಕುಡಿಯುವುದಕ್ಕೆ ಬಳಸಲು ಸಾಧ್ಯ. ನೀರನ್ನು ಹಿತಮಿತವಾಗಿ ಬಳಸಬೇಕು ಎಂದರು. ಗಾಯರಾಣ ಜಮೀನಿನಲ್ಲಿ ಬೆಳೆ ಮಾಡಿದ್ದೇವೆ. ಅಲ್ಲಿ ಕುರಿಗಾರರು ಕುರಿ ಮೇಯಿಸುವುದನ್ನು ನಿರ್ಬಂಧಿಸುವಂತೆ ಮನವಿ ಮಾಡಿದವರಿಗೆ ಶಾಸಕರು ಪ್ರತಿಕ್ರಿಯಿಸಿದರು.
ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಅನುದಾನ ನೀಡುವಂತೆ ಕೆಲ ಗ್ರಾಮಸ್ಥರು ಮನವಿ ಮಾಡಿದರು. ರಾಜ್ಯ ಸರ್ಕಾರದಿಂದ ಅನುದಾನ ಮಂಜೂರಾದ ತಕ್ಷಣ ಹಣ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು. ನಂತರ ತಾಲೂಕಿನ ಸಾರಾಪುರ-ಶಿರಹಟ್ಟಿ-ಹಂಚಿನಾಳ ರಸ್ತೆ ಸಿಡಿ ನಿರ್ಮಾಣ ಹಾಗೂ ಶಿರಹಟ್ಟಿ ಬಿ.ಕೆ.-ಬೆಳವಿ-ಸಾರಾಪುರ ಸಂಪರ್ಕ ರಸ್ತೆ ಸುಧಾರಣಾ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಬೆಮುಲ್ ನಿರ್ದೇಶಕ ರಾಯಪ್ಪ ಡೂಗ, ವಿದ್ಯುತ್ ಸಹಕಾರ ಸಂಘದ ನಿರ್ದೇಶಕ ಸತ್ಯಪ್ಪ ನಾಯಿಕ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಗುರಪ್ಪ ತಳವಾರ, ನಿರ್ದೇಶಕರಾದ ಗುರುರಾಜ ಕುಲಕರ್ಣಿ, ರಾಚಯ್ಯ ಹಿರೇಮಠ, ಶೀತಲ ಬ್ಯಾಳಿ, ಎ.ಕೆ.ಪಾಟೀಲ, ಲಾಜಮ್ ನಾಯಿಕವಾಡಿ, ಬಸಗೌಡ ಪಾಟೀಲ, ಶಿವನಗೌಡ ಪಾಟೀಲ, ಭೀಮಗೌಡ ಗಿರಿಗೌಡನವರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net