ಧೂಪದಾಳ ಗ್ರಾಮದಲ್ಲಿ ಗುರುವಾರ ಗ್ರಾಮದೇವತೆಯರ ಪುರಪ್ರವೇಶ ಅದ್ದೂರಿಯಾಗಿ ಜರುಗಿತು.
Published on:
Copied
Follow Us
ಯಕ್ಕುಂಡಿ: ಸವದತ್ತಿ ತಾಲೂಕಿನ ಧೂಪದಾಳ ಗ್ರಾಮದಲ್ಲಿ ಗ್ರಾಮದೇವತೆಯರ ಜಾತ್ರೆ ಅಂಗವಾಗಿ ಗುರುವಾರ ಉಭಯ ದೇವಿಯರ ಪುರಪ್ರವೇಶ ಅದ್ದೂರಿಯಾಗಿ ಜರುಗಿತು.
ಬೆಳಗ್ಗೆ ಗ್ರಾಮದೇವತೆಯರಿಗೆ ರುದ್ರಾಭಿಷೇಕ ಸೇರಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬ್ರಾಹ್ಮಿ ಮುಹೂರ್ತದಲ್ಲಿ ಪ್ರಾಣ ಪ್ರತಿಷ್ಠಾಪನೆ, ಮಾಂಗಲ್ಯಧಾರಣೆ, ಅಕ್ಷತಾರೋಪಣ ಹಾಗೂ ಹೋಮ-ಹವನ ನೇರವೇರಿಸಲಾಯಿತು.
ಬಳಿಕ ಧೂಪದಾಳ ಹಾಗೂ ಯಕ್ಕುಂಡಿ ಗುರು-ಹಿರಿಯರು ಗ್ರಾಮದೇವಿಯರಿಗೆ ಉಡಿ ತುಂಬುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.
ಡೊಳ್ಳಿನ ಮೇಳ ಸೇರಿದಂತೆ ವಿವಿಧ ವಾದ್ಯಗಳೊಂದಿಗೆ ಉಭಯ ದೇವಿಯರನ್ನು ಗ್ರಾಮಕ್ಕೆ ಸ್ವಾಗತಿಸಲಾಯಿತು. ನೆರೆದಿದ್ದ ಸಹಸ್ರಾರು ಭಕ್ತರು ಪರಸ್ಪರ ಭಂಡಾರ ಎರಚಿ ಸಂಭ್ರಮಿಸಿದರು.
ಉಧೋ ಉಧೋ ಎಂಬ ಭಕ್ತರ ಜಯಘೋಷಗಳ ನಡುವೆ ಗ್ರಾಮ ದೇವತೆಯರ ಹೊನ್ನಾಟ ಸಂಭ್ರಮದಿಂದ ನೆರವೇರಿತು. ಬಳಿಕ ಬಾಬದ ಮನೆಗಳಲ್ಲಿ ಉಡಿ ತುಂಬುವ ಕಾರ್ಯ ನಡೆಯಿತು. ಗ್ರಾಮದ ಗುರು-ಹಿರಿಯರು, ಜಾತ್ರಾ ಮಹೋತ್ಸವ ಕಮಿಟಿ ಸದಸ್ಯರು ಹಾಗೂ ಭಕ್ತರು ಪಾಲ್ಗೊಂಡಿದ್ದರು.