ಗ್ರಾಪಂ ಕಾರ್ಯದರ್ಶಿ ಲೋಕಾ ಬಲೆಗೆ

 ಮಹಾಂತೇಶ ಬಳ್ಳಾರಿ
ಮಹಾಂತೇಶ ಬಳ್ಳಾರಿ
Published on
ಬೆಳಗಾವಿ: ಮನೆಯ ಉತಾರೆಯಲ್ಲಿ ಮನೆ, ಅಂಗಡಿ ಹಾಗೂ ಪಕ್ಕದಲ್ಲಿರುವ ಖಾಲಿ ಜಾಗದ ಕ್ಷೇತ್ರವನ್ನು ಪಂಚಾಯತಿ ಆಸ್ತಿ ರಜಿಸ್ಟರ್‌ನಲ್ಲಿ ನಮೂದಿಸಿ ಚಾಲ್ತಿ ಉತಾರ ನೀಡುವ ಸಂಬಂಧ 22 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ರಾಮದುರ್ಗ ತಾಲೂಕಿನ ನರಸಾಪೂರ ಗ್ರಾಪಂ ಕಾರ್ಯದರ್ಶಿ ಮಹಾಂತೇಶ ಬಳ್ಳಾರಿ ಮಂಗಳವಾರ ಲೋಕಾಯುಕ್ತ ಪೊಲೀಸರು ಬಲೆಗೆ ಬಿದ್ದಿದ್ದಾನೆ.
ರಾಮದುರ್ಗ ತಾಲೂಕಿನ ಚಿಲಮೂರ ಗ್ರಾಮದ ಯಂಕಪ್ಪ ಮರಡಿ ಎಂಬುವವರು ಪತ್ನಿಯ ಹೆಸರಿನಲ್ಲಿರುವ ಆಸ್ತಿ ನಂ.420/2ರ ಮನೆಯ ಉತಾರನಲ್ಲಿ ಮನೆಯ ಸುತ್ತಲಿನ ಖಾಲಿ ಜಾಗದ ಕ್ಷೇತ್ರವನ್ನು ಚಾಲ್ತಿ ಉತಾರದಲ್ಲಿ ನಮೂದಿಸುವುದು ಹಾಗೂ ಮನೆ, ಅಂಗಡಿ ಮತ್ತು ಪಕ್ಕದ ಖಾಲಿ ಜಾಗವನ್ನು ಪಂಚಾಯತಿ ಆಸ್ತಿ ರಜಿಸ್ಟರ್‌ನಲ್ಲಿ ದಾಖಲಿಸಿ ಚಾಲ್ತಿ ಉತಾರ ನೀಡಲು ಗ್ರಾಪಂ ಕಾರ್ಯದರ್ಶಿ 22 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಮೊದಲ ಕಂತಿನಲ್ಲಿ 15 ಸಾವಿರ ರೂ. ನೀಡುವಂತೆ ಒತ್ತಾಯಿಸಿದ್ದ ಹಿನ್ನೆಲೆಯಲ್ಲಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ದೂರಿನ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಪ್ರಸನ್ನ ದೇಸಾಯಿ ಮಾರ್ಗದರ್ಶನದಲ್ಲಿ ಪೊಲೀಸ್‌ಉಪಾಧೀಕ್ಷಕ ಭರತ್ ಎಸ್.ಆರ್., ಪಿಐ ಸಂಗಮನಾಥ ಹೊಸಮನಿ, ಸಿಬ್ಬಂದಿ ಬಸವರಾಜ ಹುದ್ದಾರ, ಸಂತೋಷ ಬೇಡಗ, ಶಶಿಕುಮಾರ ದೇವರಮನಿ, ಅಭಿಜಿತ ಜಮಖಂಡಿ, ಪ್ರಕಾಶ ಮಾಳಿ ಮತ್ತು ಗುಡ್ಡಪ್ಪ ಗೊರವರ ತಂಡ ದಾಳಿ ನಡೆಸಿ ಕಾರ್ಯದರ್ಶಿ ಮಹಾಂತೇಶ 15 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗ ಹಣ ಸಮೇತ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net