ಅಸುಂಡಿಯಲ್ಲಿ ಗ್ರಾಮದೇವಿ ಜಾತ್ರೋತ್ಸವ

ಸವದತ್ತಿ ತಾಲೂಕಿನ ಅಸುಂಡಿ ಗ್ರಾಮದ ಗ್ರಾಮದೇವಿ ಜಾತ್ರೆ ಅಂಗವಾಗಿ ಹೊನ್ನಾಟ ನಡೆಯಿತು. ವೈ.ಎಸ್.ಇಂಗಳಗಿ, ಹನುಮಂತಪ್ಪ ಅಗಸಿಮನಿ, ಮಡಿವಾಳಪ್ಪ ದೇವಲಾಪುರ, ಮಂಜುನಾಥ ಗಾಣಿಗೇರ ಇತರರಿದ್ದರು.
ಸವದತ್ತಿ ತಾಲೂಕಿನ ಅಸುಂಡಿ ಗ್ರಾಮದ ಗ್ರಾಮದೇವಿ ಜಾತ್ರೆ ಅಂಗವಾಗಿ ಹೊನ್ನಾಟ ನಡೆಯಿತು. ವೈ.ಎಸ್.ಇಂಗಳಗಿ, ಹನುಮಂತಪ್ಪ ಅಗಸಿಮನಿ, ಮಡಿವಾಳಪ್ಪ ದೇವಲಾಪುರ, ಮಂಜುನಾಥ ಗಾಣಿಗೇರ ಇತರರಿದ್ದರು.
Published on
ಸವದತ್ತಿ: ತಾಲೂಕಿನ ಅಸುಂಡಿ ಗ್ರಾಮದೇವತೆಯರಾದ ದ್ಯಾಮವ್ವ ಹಾಗೂ ದುರ್ಗವ್ವ ಜಾತ್ರಾ ಮಹೋತ್ಸವ ಮಂಗಳವಾರ ಅದ್ದೂರಿಯಾಗಿ ಆರಂಭಗೊಂಡಿತು.
ಹೂಲಿ ಸಾಂಬಯ್ಯನವರ ಮಠದ ಉಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗೂ ಚಿಕ್ಕುಂಬಿಯ ಅಜಾತ ನಾಗಲಿಂಗಮಠದ ಅಭಿನವ ನಾಗಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ಬೆಳಗ್ಗೆ ಧ್ವಜಾರೋಹಣ, ಮಹಾಸಂಕಲ್ಪ ಹಾಗೂ ಕುಂಭ ಮೆರವಣಿಗೆ ಜರುಗಿದವು. ಬಳಿಕ ಸಕಲ ವಾದ್ಯಮೇಳಗಳೊಂದಿಗೆ ಗ್ರಾಮದೇವಿಯರನ್ನು ಬರಮಾಡಿಕೊಳ್ಳಲಾಯಿತು.
ನಂತರ ಗ್ರಾಮದೇವಿಯರ ಕಟ್ಟಿಗೆ ಕಾರ್ಯಕ್ರಮ ಹಾಗೂ ಚೌತಿ ಮನೆಯಲ್ಲಿ ಪ್ರತಿಷ್ಠಾಪನೆ ನೆರವೇರಿದವು. ಊರಿನ ದೈವದವರಿಂದ ಉಡಿ ತುಂಬುವ ಕಾರ್ಯಕ್ರಮ ಜರುಗಿತು. ಸಾವಿರಾರು ಭಕ್ತರು ದೇವಿ ಆಶೀರ್ವಾದ ಪಡೆದರು.
ಜಾತ್ರೆ ಅಂಗವಾಗಿ ಪ್ರತಿದಿನ ಧಾರ್ಮಿಕ ಕಾರ್ಯಕ್ರಮ, ದೇವಿ ಪುರಾಣ ಪ್ರವಚನ, ಹೊನ್ನಾಟ, ಧಾರ್ಮಿಕ ಸಭೆ ಹಾಗೂ ಅನ್ನಸಂತರ್ಪಣೆ ನಡೆಯುತ್ತಿವೆ.
ಜಾತ್ರೆ ಸಮಾರೋಪ ಅಂಗವಾಗಿ ಮೇ 15ರಂದು ಬೆಳಗ್ಗೆ 6 ಗಂಟೆಗೆ ಚಂಡಿಹೋಮ, ಪ್ರಾಣ ಪ್ರತಿಷ್ಠಾಪನೆ ಹಾಗೂ ಮಹಾಮಂಗಳ ಕಾರ್ಯಕ್ರಮ ಜರುಗಲಿವೆ. ವಿದ್ವಾನ್ ಶಂಕರಾಚಾರ್ಯ ಗುರುನಾಥಾಚಾರ್ಯ ಕಡ್ಡಾಸ್ಕರ ಹಾಗೂ ಪಂಡಿತ ಎಂ.ಎ. (ಸಂಸ್ಕೃತ ಸಾಹಿತ್ಯ) ಇವರ ಪ್ರಧಾನ ಪುರೋಹಿತ್ಯದಲ್ಲಿ ಚಂಡಿಹೋಮ ನೆರವೇರಲಿದೆ.
ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಮಹಾರಾಜ ನಿರಂಜನ ಜಗದ್ಗುರು ಕೀರ ಸಿದ್ಧರಾಮ ಸ್ವಾಮೀಜಿ ನೆರವೇರಿಸುವರು. ಹೂಲಿ ಸಾಂಬಯ್ಯನವರ ಮಠದ ಉಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗೂ ಚಿಕ್ಕುಂಬಿಯ ಅಜಾತ ನಾಗಲಿಂಗಮಠದ ಅಭಿನವ ನಾಗಲಿಂಗ ಸ್ವಾಮೀಜಿ ನೇತೃತ್ವ ವಹಿಸುವರು. ಬಳಿಕ ದೈವದ ಉಡಿ ತುಂಬುವ ಹಾಗೂ ಭಕ್ತರಿಂದ ದೇವಿಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net