ಬೇಡಿಕೆ ಈಡೇರಿಕೆಗೆ ಗ್ರಾಪಂ ನೌಕರರ ಆಗ್ರಹ

ಬೆಳಗಾವಿ ಜಿಪಂ ಎದುರು ಗುರುವಾರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಪಂ ನೌಕರರ ಧರಣಿ ನಡೆಸಿದರು.
ಬೆಳಗಾವಿ ಜಿಪಂ ಎದುರು ಗುರುವಾರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಪಂ ನೌಕರರ ಧರಣಿ ನಡೆಸಿದರು.
Published on
ಬೆಳಗಾವಿ: ಗ್ರಾಪಂ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಗುರುವಾರ ಗ್ರಾಪಂ ನೌಕರರ ಸಂಘ(ಸಿಐಟಿಯು) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಕೆಲಹೊತ್ತು ಧರಣಿ ಕುಳಿತ ಗ್ರಾಪಂ ನೌಕರರು, ಈ ಹಿಂದೆ ಪ್ರತಿಭಟನೆ ನಡೆಸಿದ್ದಾಗ ಪ್ರಮುಖ ಬೇಡಿಕೆಗಳ ಪೈಕಿ ಕೆಲವೊಂದನ್ನು ಈಡೇರಿಸುವ ಭರವಸೆ ನೀಡಲಾಗಿತ್ತು. ಆದರೆ, ಒಂದೇ ಒಂದು ಬೇಡಿಕೆ ಈಡೇರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಾಕಿ ಉಳಿದಿರುವ ಗ್ರಾಚ್ಯುಟಿ ಪ್ರಕರಣಗಳು ಇತ್ಯರ್ಥವಾಗಬೇಕು. ತೆರಿಗೆ ಅಭಿಯಾನದಲ್ಲಿ ಹೆಚ್ಚಿನ ಕರ ವಸೂಲಿ ಮಾಡಿರುವ ಮೊತ್ತದಲ್ಲಿ ಶೇ.40ರಷ್ಟನ್ನು ಸಿಬ್ಬಂದಿಯ ಎಸ್ಟ್ರೋ ಖಾತೆಗೆ ಜಮೆ ಮಾಡಬೇಕು. ಧ್ವಜಾರೋಹಣ ಭತ್ಯೆ ಬಾಕಿ ಜಮೆಯಾಗಬೇಕು. ಹಿಂದಿನ ಬಾಕಿ ವೇತನ ನೀಡಬೇಕು. ಕೂಡಲೇ ಬಡ್ತಿ ಪ್ರಕ್ರಿಯೆ ಆರಂಭಿಸಬೇಕು ಎಂದು ಆಗ್ರಹಿಸಿದರು.
ಅಧ್ಯಕ್ಷ ಜಿ.ಎಂ.ಜೈನೆಖಾನ್, ವೀರಭದ್ರ ಕಂಪ್ಲಿ, ಮಡ್ಡೆಪ್ಪ ಭಜಂತ್ರಿ, ಸಂಗಮೇಶ ಸಿದ್ನಾಳ, ಯಲ್ಲನಗೌಡ ಪಾಟೀಲ, ರಮೇಶ ಹೋಳಿ, ಯಲ್ಲಪ್ಪ ನಾಯಕ, ಗಣಪತಿ ಗುರವ, ಮಹಾಂತೇಶ ಪಾಟೀಲ, ಹನುಮಂತ ಸತ್ತಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net