ರಾಮದುರ್ಗದಲ್ಲಿ ತಾಪಂ ಇಒ ಮಾಲತೇಶ ದಾಸಪ್ಪನವರಗೆ ಗ್ರಾಪಂ ಅಭಿವೃದ್ಧಿ ಸಂಘ ಮನವಿ

ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಮಾನಸಿಕ ಒತ್ತಡ ಕಡಿಮೆ ಮಾಡಲು ಆಗ್ರಹಿಸಿ ರಾಮದುರ್ಗ ಪಿಡಿಒ ಸಂಘದ ಪದಾಧಿಕಾರಿಗಳು ತಾಪಂ ಇಒ ಮಾಲತೇಶ ದಾಸಪ್ಪನವರಗೆ ಮನವಿ ಸಲ್ಲಿಸಿದರು. ಬಲರಾಮ ಲಮಾಣಿ, ಜಗದೀಶ ದೇಸಾಯಿ, ಈರನಗೌಡ ಪಾಟೀಲ ಇತರರಿದ್ದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಮಾನಸಿಕ ಒತ್ತಡ ಕಡಿಮೆ ಮಾಡಲು ಆಗ್ರಹಿಸಿ ರಾಮದುರ್ಗ ಪಿಡಿಒ ಸಂಘದ ಪದಾಧಿಕಾರಿಗಳು ತಾಪಂ ಇಒ ಮಾಲತೇಶ ದಾಸಪ್ಪನವರಗೆ ಮನವಿ ಸಲ್ಲಿಸಿದರು. ಬಲರಾಮ ಲಮಾಣಿ, ಜಗದೀಶ ದೇಸಾಯಿ, ಈರನಗೌಡ ಪಾಟೀಲ ಇತರರಿದ್ದರು.
Published on
ರಾಮದುರ್ಗ: ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವ ಹಿಸುತ್ತಿರುವ ಅಭಿವೃದ್ಧಿ ಅಧಿಕಾರಿಗಳ ಮಾನಸಿಕ ಒತ್ತಡ, ಹಲ್ಲೆ ಪ್ರಕರಣಗಳಿಂದ ನಡೆಯುತ್ತಿರುವ ಸರಣಿ ಅಸಹಜ ಸಾವುಗಳ ತಡೆಗೆ ವಿಶೇಷ ಕಾನೂನು ರೂಪಿಸಬೇಕು ಎಂದು ರಾಮದುರ್ಗ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ತಾಪಂ ಇಒ ಮಾಲತೇಶ ದಾಸಪ್ಪನವರಗೆ ಮನವಿ ಸಲ್ಲಿಸಿದರು.
ಇತ್ತಿಚೆಗೆ ಗದಗ ಜಿಲ್ಲೆ ರೋಣ ತಾಲೂಕಿನ ಅಸೂಟಿ ಹಾಗೂ ಕೊತಬಾಳ ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಕ್ತುಂಹುಸೇನ್ ಕರಡಿಗುಡ್ಡ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಲ್ಲಿಯವರೆಗೆ ಸುಮಾರು 180 ಪಿಡಿಒಗಳ ಅಸಹಜ ಸಾವಿನ ಪ್ರಕರಣ ನಡೆದರೂ, ಸರ್ಕಾರ ಅಭಿವೃದ್ಧಿ ಅಧಿಕಾರಿಗಳ ಮೇಲಿನ ಒತ್ತಡ ಕಡಿಮೆ ಮಾಡಿ ಸೇವೆಗೆ ರಕ್ಷಣೆ ಒದಗಿಸುತ್ತಿಲ್ಲ. ಗ್ರಾಪಂನಲ್ಲಿ ಕಾರ್ಯನಿರ್ವಹಿಸಲು ಸಿಬ್ಬಂದಿ ನೇಮಕಕ್ಕೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಅಸಹಜ ಸಾವು ಪ್ರಕರಣಗಳ ವಿಶೇಷ ತನಿಖೆ, ರಕ್ಷಣಾ ಕಾನೂನು ಜಾರಿ ಮಾಡುವ ಜತೆಗೆ ಸಹಾಯ ನಿಧಿ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು. 14 ವರ್ಷಗಳಿಂದ ಬಾಕಿ ಉಳಿದಿರುವ ಬಡ್ತಿ ಪ್ರಕರಣ ಪರಿಗಣಿಸಿ, ಅವುಗಳ ತ್ವರಿತ ಇತ್ಯರ್ಥಕ್ಕೆ ಕ್ರಮ ವಹಿಸಬೇಕು ಹಾಗೂ ಪಿಡಿಒಗಳು ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರ ಒದಗಿಸಬೇಕೆಂದು
ಮನವಿ ಮೂಲಕ ಪಿಡಿಒಗಳು ಒತ್ತಾಯಿಸಿ ದ್ದಾರೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಬಿ. ಗ್ರೂಪ್ ಹುದ್ದೆ ಉನ್ನತೀಕರಣ ಸಂಘದ ತಾಲೂಕಾಧ್ಯಕ್ಷ ಬಲರಾಮ ಲಮಾಣಿ, ಜಗದೀಶ ದೇಸಾಯಿ, ಈರನಗೌಡ ಪಾಟೀಲ, ಕೃಷ್ಣಾ ಹುದ್ದಾರ, ಖ್ವಾಜಾಹುಸೇನ್ ಶಡ್ಲಗೇರಿ, ಮಂಜುನಾಥ ರಾಠೋಡ, ಸಿದ್ದಪ್ಪ ಮಾಯನ್ನವರ ಇತರರಿದ್ದರು.
ಪಂಚಾಯಿತಿಗಳಲ್ಲಿ ಪಿಡಿಒಗಳ ಒತ್ತಡ ತಗ್ಗಿಸಲು ಒತ್ತಾಯ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net