ಉತ್ಸವದಲ್ಲಿ ಕೃಷಿಗೆ ಸಂಬಂಧಿತ ವಿವಿಧ ಬೀಜಗಳು, ರಸಗೊಬ್ಬರಗಳು, ಯಂತ್ರೋಪಕರಣಗಳು ಕಾರ್ಯವಿಧಾನದ ಮಾಹಿತಿ ಪಡೆದುಕೊಂಡರು. ಜಾನುವಾರು ಪ್ರದರ್ಶನ ಕೂಡ ಉತ್ಸವದ ಪ್ರಮುಖ ಆಕರ್ಷಣೆಯಾಗಿತ್ತು. ಬ್ಯಾಂಕ್‌ಗಳು ರೈತರಿಗೆ ಬೆಳೆ ಸಾಲ, ಕೃಷಿ ಯಂತ್ರ, ನೀರಾವರಿ ಪಂಪ್‌ಸೆಟ್ ಮತ್ತು ಹೈಟೆಕ್ ಕೃಷಿ ಉಪಕರಣಗಳ ಖರೀದಿ, ಪಶುಸಂಗೋಪನೆ, ರೇಷ್ಮೆ ಕೃಷಿ ಮತ್ತು ಭೂಮಿ ಅಭಿವೃದ್ಧಿಗೆ ಸರ್ಕಾರದ ವಿವಿಧ ಯೋಜನೆಯಡಿ ಸಾಲ ಸೌಲಭ್ಯ ನೀಡುತ್ತಿವೆ. ರೈತರು ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೆನರಾ ಬ್ಯಾಂಕ್ ಆರ್‌ಜಿಎಂ ಪನಿಶಯನ್ ಎಂ. ಹೇಳಿದರು. ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಕನ್ಹೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಇತರರು ಜಾನುವಾರು ಪ್ರದರ್ಶನ ವೀಕ್ಷಿಸಿದರು.