ಫಿಯೆಸ್ಟಾ ಉತ್ಸವದಲ್ಲಿ ಉತ್ತಮ ಸಾಧನೆ

ಬೆಳಗಾವಿ ನಗರದ ರಾಜಾ ಲಖಮಗೌಡ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಈಚೆಗೆ ಹಮ್ಮಿಕೊಂಡಿದ್ದ ಫಿಯೆಸ್ಟಾ ವಿಜ್ಞಾನ ಮತ್ತು ಸಾಂಸ್ಕೃತಿಕ ಹಬ್ಬದ ಚಟುವಟಿಕೆಯಲ್ಲಿ ರನ್ನರ್ ಅಪ್ ಪ್ರಶಸ್ತಿ ಪಡೆದರು. ಸುಧಾರಾಣಿ ಹಾಲನ್ನವರ , ಮನೋಜ ಯಳ್ಳೂರಕರ ಇದ್ದರು.
ಬೆಳಗಾವಿ ನಗರದ ರಾಜಾ ಲಖಮಗೌಡ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಈಚೆಗೆ ಹಮ್ಮಿಕೊಂಡಿದ್ದ ಫಿಯೆಸ್ಟಾ ವಿಜ್ಞಾನ ಮತ್ತು ಸಾಂಸ್ಕೃತಿಕ ಹಬ್ಬದ ಚಟುವಟಿಕೆಯಲ್ಲಿ ರನ್ನರ್ ಅಪ್ ಪ್ರಶಸ್ತಿ ಪಡೆದರು. ಸುಧಾರಾಣಿ ಹಾಲನ್ನವರ , ಮನೋಜ ಯಳ್ಳೂರಕರ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಆರ್‌ಎಲ್‌ಎಸ್ ಕಾಲೇಜಿನ ವಿದ್ಯಾರ್ಥಿಗಳು ರನ್ನರ್-ಅಪ್
  • ಫಿಯೆಸ್ಟಾ ವಿಜ್ಞಾನ ಮತ್ತು ಸಾಂಸ್ಕೃತಿಕ ಹಬ್ಬ
ಬೆಳಗಾವಿ: ನಗರದ ಕೆಎಲ್‌ಇ ಸಂಸ್ಥೆಯ ರಾಜಾ ಲಖಮಗೌಡ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ 59 ವಿದ್ಯಾರ್ಥಿಗಳು ಕಾಲೇಜಿನಲ್ಲಿ ಈಚೆಗೆ ಜರುಗಿದ ಫಿಯೆಸ್ಟಾ ವಿಜ್ಞಾನ ಮತ್ತು ಸಾಂಸ್ಕೃತಿಕ ಹಬ್ಬದ ಚಟುವಟಿಕೆಗಳಲ್ಲಿ ರನ್ನರ್ ಅಪ್ ಸ್ಥಾನ ಪಡೆದಿದ್ದಾರೆ.
ರೋಹಿನಾಜ್ ತಾಂಬೋಳಿ ಮತ್ತು ಅಲೀನಾ ಪಠಾಣ ಸಮೂಹ ನೃತ್ಯ ಸ್ಪರ್ಧೆಯಲ್ಲಿ ದ್ವಿತೀಯ, ಸ್ಕಿಟ್ ಸ್ಪರ್ಧೆಯಲ್ಲಿ ದ್ವಿತೀಯ, ಕ್ವಿಜ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಸುಧೀಕ್ಷಾ ಪಾಟೀಲ ಪೇಂಟಿಂಗ್ ಸ್ಪರ್ಧೆಯಲ್ಲಿ ದ್ವಿತೀಯ ಮತ್ತು ಸ್ಕೆಚ್ ಆರ್ಟ್ ಸ್ಪರ್ಧೆಯಲ್ಲಿ ತತೀಯ, ಮೆಲೋಡಿ ಮಾಸ್ಟರ್ ಸ್ಪರ್ಧೆಯಲ್ಲಿ ಗೌತಮ ಪಾವಶೆ ದ್ವಿತೀಯ, ಸಲಾಡ್ ಮೇಕಿಂಗ್ ಸ್ಪರ್ಧೆಯಲ್ಲಿ ಮಿಥಿಲಾ ನಾರಲ್ಕರ ಮತ್ತು ಅನುಷ್ಕಾ ಯಾದವ ತೃತೀಯ, ಗ್ರೇನ್ ಆರ್ಟ್ ಸ್ಪರ್ಧೆಯಲ್ಲಿ ರಿಯಾ ಹುದಲಿ, ರಾಧಿಕಾ ಕುರಾಡೆ ತೃತೀಯ, ಕ್ವಿಜ್ ಸ್ಪರ್ಧೆಯಲ್ಲಿ ಪ್ರೀತಂ ಬಾಂದುರ್ಗೆ, ಸಿಮ್ರನ್ ಪಾಟೀಲ ತೃತೀಯ, ಡಿಬೇಟ್ ಸ್ಪರ್ಧೆಯಲ್ಲಿ ತುಷಾರಾ ಮತ್ತು ಅಮೆದುಲ್ಲಾ ಬುಖಾರಿ ತೃತೀಯ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಕೆಎಲ್‌ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಸರ್ವ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net