ಮಧ್ಯಸ್ಥಿಕೆಗೆ ಉತ್ತಮ ಸಂವಹನ ಅಗತ್ಯ

ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಮಧ್ಯಸ್ಥಿಕೆ ಕಾರ್ಯಾಗಾರವನ್ನು ಡಾ.ದೀಪಿಕಾ ಸೈನಿ ಉದ್ಘಾಟಿಸಿದರು. ಡಾ.ಎ.ಎಚ್.ಹವಾಲ್ದಾರ್, ಆರ್.ಎಸ್.ಮುತಾಲಿಕ, ಡಾ.ಸಮೀನಾ ನಹೀದ್ ಬೇಗ್, ಪ್ರೊ.ಅಶ್ವಿನಿ ಪರಬ್ ಇತರರಿದ್ದರು.
ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಮಧ್ಯಸ್ಥಿಕೆ ಕಾರ್ಯಾಗಾರವನ್ನು ಡಾ.ದೀಪಿಕಾ ಸೈನಿ ಉದ್ಘಾಟಿಸಿದರು. ಡಾ.ಎ.ಎಚ್.ಹವಾಲ್ದಾರ್, ಆರ್.ಎಸ್.ಮುತಾಲಿಕ, ಡಾ.ಸಮೀನಾ ನಹೀದ್ ಬೇಗ್, ಪ್ರೊ.ಅಶ್ವಿನಿ ಪರಬ್ ಇತರರಿದ್ದರು.
Published on
ಬೆಳಗಾವಿ: ಸಮಕಾಲೀನ ಕಾನೂನು ವ್ಯವಸ್ಥೆಯಲ್ಲಿ ಮಧ್ಯಸ್ಥಿಕೆ ಮತ್ತು ಪರ್ಯಾಯ ವಿವಾದ ಪರಿಹಾರಗಳ ಪ್ರಾಮುಖ್ಯ ಹೆಚ್ಚುತ್ತಿರುವ ಕುರಿತು ಕಾನೂನು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕಿದೆ ಎಂದು ಸುಪ್ರೀಂ ಕೋರ್ಟ್ ವಕೀಲೆ ಹಾಗೂ ಪರ್ಯಾಯ ವಿವಾದ ಪರಿಹಾರ ಸಂಸ್ಥೆ ಸಂಸ್ಥಾಪಕಿ ಡಾ.ದೀಪಿಕಾ ಸೈನಿ ಹೇಳಿದರು.
ರಾಜಾ ಲಖಮಗೌಡ ಕಾನೂನು ಕಾಲೇಜಿನ ಐಕ್ಯೂಎಸಿ ಇಂಟರ್ನ್‌ಶಿಪ್ ಮತ್ತು ಪ್ಲೇಸ್‌ಮೆಂಟ್ ಸೆಲ್ ಸಹಯೋಗದಲ್ಲಿ ಈಚೆಗೆ ಹಮ್ಮಿಕೊಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಮಧ್ಯಸ್ಥಿಕೆ ವಿಕಸನ, ನಿಯಂತ್ರಣ, ಕಾನೂನು ಚೌಕಟ್ಟು ಮತ್ತು ಮಧ್ಯಸ್ಥಿಕೆ ವಲಯದಲ್ಲಿ ಯುವ ಕಾನೂನು ವೃತ್ತಿಪರರಿಗೆ ಅವಕಾಶಗಳ ಕುರಿತು ವಿವರಿಸಿ, ಯಶಸ್ವಿ ಮಧ್ಯಸ್ಥಿಕೆಗೆ ಸಂವಹನ ಕೌಶಲ ಮತ್ತು ನೈತಿಕತೆ ಮಹತ್ವದ್ದಾಗಿವೆ ಎಂದರು.
ಆರ್‌ಎಲ್ ಕಾನೂನು ಕಾಲೇಜಿನ ಪ್ರಾಚಾರ್ಯ ಡಾ.ಎ.ಎಚ್.ಹವಾಲ್ದಾರ್, ಆಡಳಿತ ಮಂಡಳಿ ಅಧ್ಯಕ್ಷ ಆರ್.ಎಸ್.ಮುತಾಲಿಕ, ಐಕ್ಯೂಎಸಿ ಸಂಯೋಜಕಿ ಡಾ.ಸಮೀನಾ ನಹೀದ್ ಬೇಗ್, ಇಂಟರ್ನ್‌ಶಿಪ್ ಸೆಲ್ ಅಧ್ಯಕ್ಷೆ ಪ್ರೊ.ಅಶ್ವಿನಿ ಪರಬ್, ಪ್ಲೇಸ್ಮೆಂಟ್ ಸೆಲ್ ಅಧ್ಯಕ್ಷೆ ಪ್ರೊ.ಜ್ಯೋತಿ ಕುಲಕರ್ಣಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net