ಈ ಯೋಜನೆ ರೈತ ಉತ್ಪಾದಕ ಸಂಸ್ಥೆಗಳು (FPOs), ಕ್ಲಸ್ಟರ್ ಮಟ್ಟದ ಒಕ್ಕೂಟಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು, ನೊಂದಾಯಿತ ಸಂಸ್ಥೆಗಳು ಹಾಗೂ ವೈಯಕ್ತಿಕ ರೈತರಿಗೆ ಮಹತ್ವದ ಅವಕಾಶವನ್ನು ನೀಡುತ್ತಿದೆ. ಬೇಳೆ ಕಾಳುಗಳಲ್ಲಿ ಮೌಲ್ಯವರ್ಧನೆ ಮೂಲಕ ಹೆಚ್ಚುವರಿ ಲಾಭ ಪಡೆಯಲು ಇದು ಉತ್ತಮ ವೇದಿಕೆ ಎಂದು ಕೃಷಿ ಇಲಾಖೆ ತಿಳಿಸಿದೆ.