ರಾಗಬದ್ಧವಾಗಿ ಸ್ತೋತ್ರ ಪಠಿಸುವ ಮಕ್ಕಳಲ್ಲಿ ದೇವರಿದ್ದಾರೆ

ಬೆಳಗಾವಿಯ ನಾಗಸುಧಾ ಸಂಗೀತ ಶಾಲೆಯಲ್ಲಿ ಸೋಮವಾರ ಜರುಗಿದ ಕಾರ್ಯಕ್ರಮವನ್ನು ಆಶಾ ಯಮಕನಮರಡಿ ಉದ್ಘಾಟಿಸಿದರು. ಪೂರ್ಣಿಮಾ ಪತ್ತಾರ, ಡಾ.ಸತ್ಯನಾರಾಯಣ, ಮಹಾದೇವಿ ಬೆಳಕೂಡ ಇತರರಿದ್ದರು.
ಬೆಳಗಾವಿಯ ನಾಗಸುಧಾ ಸಂಗೀತ ಶಾಲೆಯಲ್ಲಿ ಸೋಮವಾರ ಜರುಗಿದ ಕಾರ್ಯಕ್ರಮವನ್ನು ಆಶಾ ಯಮಕನಮರಡಿ ಉದ್ಘಾಟಿಸಿದರು. ಪೂರ್ಣಿಮಾ ಪತ್ತಾರ, ಡಾ.ಸತ್ಯನಾರಾಯಣ, ಮಹಾದೇವಿ ಬೆಳಕೂಡ ಇತರರಿದ್ದರು.
Published on
ಬೆಳಗಾವಿ :
ದೇವರನ್ನು ಹುಡುಕಿಕೊಂಡು ಎಲ್ಲಿಯೋ ಹೋಗಬೇಕಿಲ್ಲ, ನಿಷ್ಕಲ್ಮಷ, ಪರಿಶುದ್ಧವಾಗಿ ಹಾಗೂ ರಾಗ ಮತ್ತು ಲಯಬದ್ಧವಾಗಿ ಮಕ್ಕಳು ಸ್ತೋತ್ರ ಪಠಿಸಿದರೆ ಸಾಕು ಅವರೇ ದೇವರಿಗೆ ಸಮನಾಗಿ ಕಾಣುತ್ತಾರೆ ಎಂದು ಲೇಖಕಿ ಆಶಾ ಯಮಕನಮರಡಿ ಹೇಳಿದರು.
ಟಿಳಕವಾಡಿಯ ನಾದ ಸುಧಾ ಸಂಗೀತ ಶಾಲೆಯ ಆವರಣದಲ್ಲಿ ಸೋಮವಾರ ಜರುಗಿದ ಅಧಿಕ ಮಾಸದ ಶಿವಪಂಚಾಕ್ಷರಿ ನಕ್ಷತ್ರ ಮಾಲಾ ಪಠಣ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಶಿವ ಪಂಚಾಕ್ಷರಿ ನಕ್ಷತ್ರ ಮಾಲಾ ಪಠಣವನ್ನು ಆಲಿಸಿದಾಗ ಮಕ್ಕಳು ಸಂಗೀತದ ಜತೆಗೆ ಸಂಸ್ಕೃತಿ, ಸಂಸ್ಕಾರವನ್ನೂ ಕಲಿತಿರುವುದು ಗೊತ್ತಾಗುತ್ತದೆ. ಪುಟ್ಟ ಮಕ್ಕಳ ಹೂ ಮನಕ್ಕೆ ಸಂಗೀತದ ಮೂಲಕ ಸಂಸ್ಕಾರ ನೀಡಿ, ಅವರ ಮನಸ್ಸನ್ನು ವಿಕಸನಗೊಳಿಸಿ ಬುದ್ಧಿ, ಚೈತನ್ಯ ತುಂಬಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬಹುದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಆಶಾ ಯಮಕಮರಡಿಯವರಿಗೆ ದಶಕದ ಅತ್ಯುತ್ತಮ ಲೇಖಕಿ ಹಾಗೂ ಪೂರ್ಣಿಮಾ ಪತ್ತಾರರಿಗೆ ದಶಕದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ನೀಡಲಾಯಿತು. ವಿವಿಧ ಕಾರ್ಯಕ್ರಮಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ನಾದ ಸುಧಾ ಸಂಗೀತ ಶಾಲೆಯ ಸಂಸ್ಥಾಪಕ ಡಾ. ಸತ್ಯನಾರಾಯಣ ಸ್ವಾಗತಿಸಿದರು. ಮಹಾದೇವಿ ಬೆಳಕೂಡ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net