3.77 ಲಕ್ಷ ರೂ. ಮೌಲ್ಯದ ಗೋವಾ ಮದ್ಯ ಜಪ್ತಿ

  ಬೆಳಗಾವಿ ತಾಲೂಕಿನ ಮುತ್ನಾಳ ಗ್ರಾಮದ ಬಳಿ ಶೆಡ್‌ನಲ್ಲಿ ಪತ್ತೆಯಾದ ಗೋವಾ ಮದ್ಯ ಜಪ್ತಿ ಮಾಡಿಕೊಂಡಿರುವ ಅಬಕಾರಿಪೊಲೀಸರು.
ಬೆಳಗಾವಿ ತಾಲೂಕಿನ ಮುತ್ನಾಳ ಗ್ರಾಮದ ಬಳಿ ಶೆಡ್‌ನಲ್ಲಿ ಪತ್ತೆಯಾದ ಗೋವಾ ಮದ್ಯ ಜಪ್ತಿ ಮಾಡಿಕೊಂಡಿರುವ ಅಬಕಾರಿಪೊಲೀಸರು.
Published on
ನಗರ, ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ಅಡ್ಡೆಯ ಮೇಲೆ ದಾಳಿ ಮುಂದುವರಿಸಿರುವ ಅಬಕಾರಿ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿ, 3.77 ಲಕ್ಷ ರೂ. ಮೌಲ್ಯದ ಗೋವಾ ಮದ್ಯ ಜಪ್ತಿ ಮಾಡಿಕೊಂಡಿದ್ದಾರೆ.
ಮಾ.3ಂದು ಮಧ್ಯರಾತ್ರಿ ಹಿರೇಬಾಗೇವಾಡಿ ಗ್ರಾಮದಿಂದ ಮುತ್ನಾಳ ಗ್ರಾಮಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆಯ ಬಳಿ ಶೆಡ್‌ನಲ್ಲಿ ಗೋವಾ ರಾಜ್ಯದ ವಿವಿಧ ನಮೂನೆಯ ಮದ್ಯ ಹಾಗೂ ಬೀಯರ ಬಾಕ್ಸ ಮಾರಾಟದ ಉದ್ದೇಶದಿಂದ ಅಕ್ರಮ ಮದ್ಯ ಸಂಗ್ರಹಿಸಿಟ್ಟಿರುವ ಕುರಿತು ಮಾಹಿತಿ ಆಧಾರದ ಮೇಲೆ ದಾಳಿ ನಡೆಸಿದಾಗ 3,77,500 ಮೌಲ್ಯದ 553.96.ಲೀ ಗೋವಾ ಮದ್ಯ ಹಾಗೂ 23.400.ಲೀ ಬೀಯರ್ ಪತ್ತೆಯಾಗಿದೆ.
ಕಳೆದ ಹಲವು ದಿನಗಳಿಂದ ಗೋವಾ, ರಕ್ಷಣಾ ಇಲಾಖೆಗೆ ಸೇರಿ ಅಕ್ರಮ ಮದ್ಯ ಮಾರಾಟ ಮತ್ತು ಸಾಗಾಟ ಮಾಡುತ್ತಿರುವ ಕುರಿತು ಮೇಲಿಂದ ಮೇಲೆ ದೂರು ಬಂದಿರುವ ಹಿನ್ನೆಲೆ ಅಬಕಾರಿ ಅಪರ ಆಯುಕ್ತ ಡಾ.ವೈ.ಮಂಜುನಾಥ, ಅಬಕಾರಿ ಜಂಟಿ ಆಯುಕ್ತ ಎಫ್.ಎಚ್.ಛಲವಾದಿ ಹಾಗೂ ಅಬಕಾರಿ ಉಪ ಆಯುಕ್ತ ಜಗದೀಶ ಕುಲಕರ್ಣಿ ನಿರ್ದೇಶನದ ಮೇಲೆ ಗ್ರಾಮೀಣ ಭಾಗದಲ್ಲಿ ಗಸ್ತು ಕಾರ್ಯ ಕೈಗೊಳ್ಳಲಾಗಿದೆ. ಅಲ್ಲದೆ, ಹೆದ್ದಾರಿ ಪಕ್ಕದಲ್ಲಿರುವ ದಾಬಾ, ಹೋಟೆಲ್ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ.
ಈಗಾಗಲೇ ಗೋವಾ ಮದ್ಯವನ್ನು ಜಿಲ್ಲೆಯಲ್ಲಿ ಅಕ್ರಮವಾಗಿ ಮಾಡುವತ್ತಿರುವ ಪರಿಣಾಮ ಅಬಕಾರಿ ಆದಾಯಕ್ಕೆ ಹೊಡೆ ಬಿಳುತ್ತಿದೆ ಎಂದು ಮದ್ಯದ ಅಂಗಡಿ ಮಾಲೀಕರು ದೂರಿದ್ದಾರೆ.ಗೋವಾದಿಂದ ಬೆಳಗಾವಿ ಪ್ರವೇಶಿಸುವ ವಿವಿಧ ಮಾರ್ಗಗಗಳಲ್ಲಿ ಸಂಚರಿಸುವ ಪ್ರತಿಯೊಂದು ವಾಹನ ತಪಾಸಣೆ ನಡೆಸಲಾಗುತ್ತಿದೆ. ಗೋವಾ, ಕರ್ನಾಟಕ ಸಾರಿಗೆ ಬಸ್‌ಗಳನ್ನು ಕೂಡ ತಪಾಸಣೆ ನಡೆಸಲಾಗುತ್ತಿದೆ. ಅಕ್ರಮ ಮದ್ಯ ಮಾರಾಟಗಾರ ಮೇಲೆ ಮುಲ್ಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುತ್ತಿದೆ. ಜತೆಗೆ ಗೋವಾ ಮದ್ಯ ಪೂರೈಕೆ ಮಾಡುತ್ತಿರುವ ವ್ಯವಸ್ಥಿತ ಜಾಲ ಬೇದಿಸಲು ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net