ಚಿಕ್ಕೋಡಿ : ಅಕ್ರಮವಾಗಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಮಹಿಳೆಯೋರ್ವಳನ್ನು ಪೊಲೀಸರು ವಶಕ್ಕೆ ಪಡೆದು 15 ಸಾವಿರ ರೂ. ಮೌಲ್ಯದ ೧೬೫ ಗ್ರಾಂ ಗಾಂಜಾ ಪದಾರ್ಥ ಜಪ್ತಿ ಮಾಡಿಕೊಂಡಿದ್ದಾರೆ.
ತಾಲೂಕಿನ ರಾಮನಗರ ಗ್ರಾಮದ ನಿವಾಸಿ ವಂದನಾ ರಾಜು ಹೊಸಮನಿ( 50) ಆರೋಪಿ. ಆರೋಪಿ ಮಹಿಳೆ ಗಾಂಜಾ ಪ್ಯಾಕೇಟ್ ಮಾರಾಟ ಮಾಡುತ್ತಿರುವುದು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ,ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಪಡೆದಿದ್ದಾರೆ.
ಈ ಕುರಿತು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.