ಹಿಂದೂ ಪರಂಪರೆ ಮಹತ್ವ ಅರಿಯಲಿ

ರಾಮದುರ್ಗದ ವೀರರಾಣಿ ಚನ್ನಮ್ಮ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಬಾಲಸಂಸ್ಕಾರ ಶಿಬಿರವನ್ನು ಗಂಗಾಧರ ಬೋಸಲೆ ಉದ್ಘಾಟಿಸಿದರು. ವಿಜಯೇಂದ್ರ ಜೋಷಿ, ಸುನಿತಾ ತಿಮ್ಮನಗೌಡರ, ಪ್ರಕಾಶ ಸೂಳಿಭಾವಿ, ಸಂಗಮೇಶ ಉದಪುಡಿ ಇತರರಿದ್ದರು.
ರಾಮದುರ್ಗದ ವೀರರಾಣಿ ಚನ್ನಮ್ಮ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಬಾಲಸಂಸ್ಕಾರ ಶಿಬಿರವನ್ನು ಗಂಗಾಧರ ಬೋಸಲೆ ಉದ್ಘಾಟಿಸಿದರು. ವಿಜಯೇಂದ್ರ ಜೋಷಿ, ಸುನಿತಾ ತಿಮ್ಮನಗೌಡರ, ಪ್ರಕಾಶ ಸೂಳಿಭಾವಿ, ಸಂಗಮೇಶ ಉದಪುಡಿ ಇತರರಿದ್ದರು.
Published on
ರಾಮದುರ್ಗ: ಏಳನೇ ತರಗತಿಯಿಂದ ಪ್ರಥಮ ಪಿಯುಸಿವರೆಗೆ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ನಗರದ ವೀರರಾಣಿ ಚನ್ನಮ್ಮ ವಿದ್ಯಾಲಯದಲ್ಲಿ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಬಾಲಸಂಸ್ಕಾರ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ವೀರರಾಣಿ ಚನ್ನಮ್ಮ ಶಾಲೆಯ ಸಂಸ್ಥಾಪಕ ಗಂಗಾಧರ ಭೋಸಲೆ ಮಾತನಾಡಿ, ಮಕ್ಕಳಿಗೆ ಚಿಕ್ಕವರಿದ್ದಾಗಲೇ ಉತ್ತಮ ಸಂಸ್ಕಾರ ನೀಡುವುದು ಅಗತ್ಯವಾಗಿದ್ದು, ದೇಸಿ ಆಟೋಟಗಳು, ಭಗವದ್ಗೀತೆ ಶ್ಲೋಕ, ಭಜನೆಗಳ ಮೂಲಕ ಹಿಂದೂ ಪರಂಪರೆಯ ಮಹತ್ವ ತಿಳಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ವಿಶ್ವ ಹಿಂದೂ ಪರಿಷತ್ ವಿಭಾಗ ಸತ್ಸಂಗ ಪ್ರಮುಖ ವಿಜಯೇಂದ್ರ ಜೋಷಿ, ಜಿಲ್ಲಾ ಮಾತಶಕ್ತಿ ಸಂಚಾಲಕಿ ಸುನಿತಾ ತಿಮ್ಮನಗೌಡರ, ಪ್ರಖಂಡ ಅಧ್ಯಕ್ಷ ಪ್ರಕಾಶ ಸೂಳಿಭಾವಿ, ಕಾರ್ಯದರ್ಶಿ ಸಂಗಮೇಶ ಉದಪುಡಿ ಮಾತನಾಡಿದರು. ಮಾತಶಕ್ತಿ ಸಂಚಾಲಕಿ ಅನಸೂಯಾ ತಿಮ್ಮನಗೌಡರ, ನಗರ ಸಮಿತಿ ಅಧ್ಯಕ್ಷ ಸೋಮಶೇಖರ ಸೊಗಲದ, ನಗರ ಸತ್ಸಂಗ ಪ್ರಮುಖ ಬಸವರಾಜ ಆರಿಬೆಂಚಿ, ಶಿಬಿರ ಸಂಚಾಲಕರಾದ ಕವಿತಾ ಬಲಕುಂದಿ, ಗೀತಾ ಗೊರಗುದ್ದಿ, ಸುಭದ್ರಾ ನಂದಿ, ಸುಮಂಗಲಾ ಸೂಳಿಭಾವಿ ಇತರರಿದ್ದರು.
ರಾಮದುರ್ಗದ ವೀರರಾಣಿ ಚನ್ನಮ್ಮ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಬಾಲಸಂಸ್ಕಾರ ಶಿಬಿರವನ್ನು ಗಂಗಾಧರ ಬೋಸಲೆ ಉದ್ಘಾಟಿಸಿದರು. ವಿಜಯೇಂದ್ರ ಜೋಷಿ, ಸುನಿತಾ ತಿಮ್ಮನಗೌಡರ, ಪ್ರಕಾಶ ಸೂಳಿಭಾವಿ, ಸಂಗಮೇಶ ಉದಪುಡಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net