ಜಾನಪದ ಕನ್ನಡ ನಾಡಿನ ಜೀವಾಳ

ಬೆಳಗಾವಿಯಲ್ಲಿ ಭಾನುವಾರ ಜರುಗಿದ ಭಜನ ಸಂಧ್ಯಾದಲ್ಲಿ ಜಾನಪದ ತಜ್ಞೆ ಡಾ.ಪಾರ್ವತೆವ್ವ ಹೊಂಗಲಗೆ ಸನ್ಮಾನಿಸಲಾಯಿತು. ಶೈಲಜಾ ಬಿಂಗೆ, ಜ್ಯೋತಿ ಬದಾಮಿ, ಜಯಶೀಲಾ ಬ್ಯಾಕೋಡ, ಶ್ರೀದೇವಿ ಅಂಟಿನ, ರಾಜೇಶ್ವರಿ ಕಲೂತಿ, ಲಕ್ಷ್ಮೀ ಸಾಣಿಕೊಪ್ಪ ಇತರರಿದ್ದರು.
ಬೆಳಗಾವಿಯಲ್ಲಿ ಭಾನುವಾರ ಜರುಗಿದ ಭಜನ ಸಂಧ್ಯಾದಲ್ಲಿ ಜಾನಪದ ತಜ್ಞೆ ಡಾ.ಪಾರ್ವತೆವ್ವ ಹೊಂಗಲಗೆ ಸನ್ಮಾನಿಸಲಾಯಿತು. ಶೈಲಜಾ ಬಿಂಗೆ, ಜ್ಯೋತಿ ಬದಾಮಿ, ಜಯಶೀಲಾ ಬ್ಯಾಕೋಡ, ಶ್ರೀದೇವಿ ಅಂಟಿನ, ರಾಜೇಶ್ವರಿ ಕಲೂತಿ, ಲಕ್ಷ್ಮೀ ಸಾಣಿಕೊಪ್ಪ ಇತರರಿದ್ದರು.
Published on
ಬೆಳಗಾವಿ : ತಂತ್ರಜ್ಞಾನ ಯುಗದಲ್ಲಿ ಜಾನಪದ ಕಲೆಗಳಿಗೆ ಪ್ರೋತ್ಸಾಹದ ಕೊರತೆ ಎದುರಾಗುತ್ತಿದೆ. ನೆಮ್ಮದಿಯ ಬದುಕಿಗೆ ಜಾನಪದ ಕಲೆಗಳು ಅಮೂಲ್ಯ ಆಸ್ತಿಯಾಗಿದ್ದು, ರಂಗಭೂಮಿಯ ಮೂಲಕ ಸಾವಿರಾರು ಕಲಾವಿದರು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಜಾನಪದ ಕಲೆಯಲ್ಲಿ ಅಪಾರ ಶಕ್ತಿ ಅಡಗಿದ್ದು, ಅದನ್ನು ಮುಂದಿನ ಪೀಳಿಗೆಗೂ ತಲುಪಿಸುವ ಕೆಲಸ ಆಗಬೇಕಿದೆ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಜಾನಪದ ತಜ್ಞೆ ಡಾ.ಪಾರ್ವತೆವ್ವ ಹೊಂಗಲ ಹೇಳಿದರು.
ಶಿವನಬಸವನಗರ ಲಿಂಗಾಯತ ಭವನದಲ್ಲಿ ಲಿಂಗಾಯತ ಮಹಿಳಾ ಸಮಾಜ ಭಾನುವಾರ ಏರ್ಪಡಿಸಿದ್ದ ‘ಭಜನ-ಸಂಧ್ಯಾ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಾನಪದ ಸಾಹಿತ್ಯವು ಕನ್ನಡ ಸಂಸ್ಕೃತಿಯ ಜೀವಾಳವಾಗಿದೆ. ಇದು ಸದಾ ಚಲನಶೀಲವಾಗಿರಬೇಕು. ಆದರೆ, ಸಣ್ಣಾಟ, ಗೀಗೀ ಪದ ಸೇರಿ ಅನೇಕ ಸಾಂಪ್ರದಾಯಿಕ ಕಲೆಗಳು ಇಂದು ಕ್ಷೀಣಿಸುತ್ತಿವೆ. ಹಳ್ಳಿಗಳ ಜೀವನಶೈಲಿಯೂ ಬದಲಾಗುತ್ತಿರುವ ಹಿನ್ನೆಲೆಯಲ್ಲಿ ಇಂತಹ ಕಲೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದು ಅಗತ್ಯ. ಇದು ಸದಾ ಚಲನಶೀಲವಾಗಿರಬೇಕು. ಅದರ ಬೆಳವಣಿಗೆ ಮತ್ತು ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ ಎಂದರು.
ಲಿಂಗಾಯತ ಮಹಿಳಾ ಸಮಾಜದ ಸಂಸ್ಥಾಪಕ ಅಧ್ಯಕ್ಷೆ ಶೈಲಜಾ ಬಿಂಗೆ, ಜ್ಯೋತಿ ಬದಾಮಿ, ಜಯಶೀಲಾ ಬ್ಯಾಕೋಡ, ಕಾರ್ಯದರ್ಶಿ ಶ್ರೀದೇವಿ ಅಂಟಿನ, ಅಧ್ಯಕ್ಷೆ ರಾಜೇಶ್ವರಿ ಕಲೂತಿ, ಸಹ ಕಾರ್ಯದರ್ಶಿ ಲಕ್ಷ್ಮೀ ಸಾಣಿಕೊಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net