ಎಫ್​ಒಎಬಿ ಸಂಟನೆ ಕಾರ್ಯ ಪ್ರಶಂಸನೀಯ

ನಗರದ ಫೌಂಡ್ರಿ ಕ್ಲಸ್ಟರ್​ ಸಭಾಭವನದಲ್ಲಿ ಗುರುವಾರ ಸಭೆ ನಡೆಯಿತು. ಪ್ರಭಾಕರ ನಾಗರಮುನೋಳಿ, ಸಂಚಾಲಕ ಚೈತನ್ಯ ಕುಲಕರ್ಣಿ, ಎಂ.ಕೆ.ಹೆಗಡೆ, ಡಾ.ಎಚ್​.ಬಿ.ರಾಜಶೇಖರ, ಬಿ.ಜಿ.ಧರೆಣ್ಣಿ, ಸಚಿನ್​ ಸಬ್ನಿಸ್​, ಸಿ.ಬಿ.ಹಿರೇಮಠ ಇತರರಿದ್ದರು.
ನಗರದ ಫೌಂಡ್ರಿ ಕ್ಲಸ್ಟರ್​ ಸಭಾಭವನದಲ್ಲಿ ಗುರುವಾರ ಸಭೆ ನಡೆಯಿತು. ಪ್ರಭಾಕರ ನಾಗರಮುನೋಳಿ, ಸಂಚಾಲಕ ಚೈತನ್ಯ ಕುಲಕರ್ಣಿ, ಎಂ.ಕೆ.ಹೆಗಡೆ, ಡಾ.ಎಚ್​.ಬಿ.ರಾಜಶೇಖರ, ಬಿ.ಜಿ.ಧರೆಣ್ಣಿ, ಸಚಿನ್​ ಸಬ್ನಿಸ್​, ಸಿ.ಬಿ.ಹಿರೇಮಠ ಇತರರಿದ್ದರು.
Published on
ಬೆಳಗಾವಿ: ನಗರದ ಅಭಿವೃದ್ಧಿ ದೃಷ್ಟಿಯಿಂದ ಎಫ್​ಒಎಬಿ ಸಂಟನೆಯ ಕಾರ್ಯ ಅತ್ಯಂತ ಪ್ರಶಂಸನೀಯವಾಗಿದೆ. ಮುಂದಿನ ದಿನಗಳಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಂಟನೆ ಮಾಡಬೇಕು ಎಂದು ಫೌಂಡ್ರಿ ಕ್ಲಸ್ಟರ್​ ಚೇರ್ಮನ್​ ರಾಮ ಭಂಡಾರೆ ಹೇಳಿದರು.
ನಗರದ ಫೌಂಡ್ರಿ ಕ್ಲಸ್ಟರ್​ ಸಭಾಭವನದಲ್ಲಿ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು. ಅಭಿವೃದ್ಧಿಗೆ ಪೂರಕವಾಗಿ ರೂಪಿಸಬೇಕಿರುವ ರೈಲ್ವೆ ಮೇಲ್ಸೇತುವೆ ಯೋಜನೆ, ಸಂಚಾರ ದಟ್ಟಣೆ ನಿವಾರಿಸಬೇಕಿರುವ ರಿಂಗ್​ ರಸ್ತೆ, ಕೈತಪ್ಪಿ ಹೋಗುವ ಹಂತದಲ್ಲಿರುವ ಸಿಟೀಸ್​ 2, ರ್ನಿಲಕ್ಷಕ್ಕೊಳಗಾಗಿರುವ ಸಿಡಿಪಿ ಹಾಗೂ ಎಸ್​ಟಿಪಿ ಯೋಜನೆ, ತುರ್ತಾಗಿ ಮೇಲ್ದರ್ಜೆಗೇರಿಸಬೇಕಾಗಿರುವ ಹೆಸ್ಕಾಂ ಪವರ್​ ಸ್ಟೇಷನ್​, ಗೇಲ್​ ಗ್ಯಾಸ್​ ಪೈಪ್​ ಲೈನ್​, ಬಯೋಗ್ಯಾಸ್​, ಗೋಬರ್​ ಧನ್​ ಯೋಜನೆ ಕುರಿತು ಚರ್ಚಿಸಲಾಯಿತು.
ಹಲಗಾ& ಮಚ್ಛೆ ಬೈ ಪಾಸ್​ ಮತ್ತು ಯಡಿಯೂರಪ್ಪ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ಮಹಾತ್ಮ ಫುಲೆ ರಸ್ತೆಗಳನ್ನು ಸಂಚಾರಕ್ಕೆ ಮುಕ್ತ ಮಾಡದೆ ನರದಲ್ಲಿ ಫ್ಲೆ ಓವರ್​ ನಿರ್ಮಾಣದಿಂದ ಆಗಬಹುದಾದ ಸಂಚಾರ ದಟ್ಟಣೆ ಕುರಿತು ಚರ್ಚಿಸಲಾಯಿತು.
ವಾಣಿಜ್ಯೋದ್ಯಮ ಸಂದ ಅಧ್ಯ ಪ್ರಭಾಕರ ನಾಗರಮುನೋಳಿ, ಸಂಚಾಲಕ ಚೈತನ್ಯ ಕುಲಕರ್ಣಿ, ಎಂ.ಕೆ.ಹೆಗಡೆ, ಡಾ.ಎಚ್​.ಬಿ.ರಾಜಶೇಖರ, ಬಿ.ಜಿ.ಧರೆಣ್ಣಿ, ಸಚಿನ್​ ಸಬ್ನಿಸ್​, ಸಿ.ಬಿ.ಹಿರೇಮಠ, ಯುವರಾಜ ಹುಲಜಿ, ಆನಂದ ಕುಲಕರ್ಣಿ, ಸದಾನಂದ ಹುಂಬರವಾಡಿ, ವಿಜಯ ಮುಚ್ಚಂಡಿಕರ, ರಾಜೇಂದ್ರ ಮುಂದಡ, ಪ್ರಸನ್ನ ಕೋಚರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net