ಮೂಲತಃ ಎಪಿಎಂಸಿ ಅಡಿಯಲ್ಲಿ ಈಗಾಗಲೇ ಹೂವಿನ ಮಾರುಕಟ್ಟೆ ಇದೆ. ತೋಟಗಾರಿಕೆ ಇಲಾಖೆಯಿಂದ ಹಂಚಿಕೆ ಮಾಡಿರುವ ಹೂವಿನ ಮಾರುಕಟ್ಟೆಯೂ ಇದೆ. ಇದರ ಹೊರತಾಗಿ ದಂಡು ಮಂಡಳಿಯೂ ಹೂವಿನ ಮಾರುಕಟ್ಟೆ ಮಾಡಲು ಹೊರಟಿತ್ತು. ವಾರದಿಂದ ಹೂವಿನ ಮಾರುಕಟ್ಟೆ ಬಗ್ಗೆ ಚರ್ಚೆಯಾಗಿತ್ತು. ಹೀಗಾಗಿ ವ್ಯಾಪಾರಿಗಳನ್ನು ಕರೆದು, ತಿಳಿ ಹೇಳಲಾಗಿದೆ. ಈಗ ದಂಡು ಮಂಡಳಿಯಲ್ಲಿ ವ್ಯಾಪಾರ ಮಾಡಲು ಮುಂದಾಗಿದ್ದವರಿಗೂ ಎಪಿಎಂಸಿ, ತೋಟಗಾರಿಕೆ ಇಲಾಖೆ ಅಧೀನದಲ್ಲೇ ಉಪ ಮಾರುಕಟ್ಟೆ ಮಾಡಿ ಕೊಡಲಾಗುವುದು. ಇಲ್ಲಿಯೇ ಬಂದು ವ್ಯಾಪಾರ ಆರಂಭಿಸುವಂತೆ ಹೇಳಿದ್ದೇವೆ. ಸದ್ಯಕ್ಕೆ ದಂಡು ಮಂಡಳಿಯ ಮಾರುಕಟ್ಟೆ ಆರಂಭವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.