ತಿಗಡಿ ಹರಿನಾಲಾದಿಂದ ತುಂಬಿಸಲಾದ ಕೆರೆಯನ್ನು ಗುತ್ತಿಗೆ ಪಡೆದಿದ್ದ ಶಂಕರಗೌಡ ಪಾಟೀಲ, ಸುಮಾರು ಐವತ್ತು ಸಾವಿರ ಮೀನು ಮರಿಗಳ ಸಾಕಾಣಿಕೆ ಮಾಡಿದ್ದರು. ಯುಗಾದಿ ಬಳಿಕ ಮೀನುಗಳನ್ನು ಹಿಡಿದು, ಮಾರುಕಟ್ಟೆಗೆ ಕಳುಹಿಸಲು ಯೋಚಿಸಿದ್ದರು. ಆದರೆ ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆಯೇ ಬಿಸಿಲಿನ ಝಳದಿಂದಾಗಿ, ಎರಡೇ ದಿನದಲ್ಲಿ ಸುಮಾರು 2ಕ್ವಿಂಟಾಲ್‌ದಷ್ಟು ಮೀನುಗಳು ಸತ್ತಿವೆ.