ನಂಬರ ಪ್ಲೇಟ್ ಇಲ್ಲದ ಬೈಕ್‌ಗಳಿಗೆ ದಂಡ

ಪ್ರಕರಣ ದಾಖಲಿಸಿದ ಬೈಕ್‌ಗಳು
ಪ್ರಕರಣ ದಾಖಲಿಸಿದ ಬೈಕ್‌ಗಳು
Published on
ಬೆಳಗಾವಿ: ನಗರ ಪ್ರದೇಶದಲ್ಲಿ ನಂಬರ ಪ್ಲೇಟ್ ಇಲ್ಲದ ಹಾಗೂ ದೋಷಪೂರಿತ ನಂಬರ ಪ್ಲೇಟ್ ಅಳವಡಿಸಿಕೊಂಡು ಸಂಚರಿಸುವ ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಕೊಂಡಿರುವ ಪೊಲೀಸರು, ವಿವಿಧ ಠಾಣೆ ವ್ಯಾಪ್ತಿಯಲ್ಲಿ ಒಟ್ಟು 126 ದ್ವಿಚಕ್ರ ವಾಹನಗಳ ವಿರುದ್ಧ ಮೋಟಾರು ವಾಹನ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು 63 ಸಾವಿರ ರೂ. ದಂಡ ವಿಧಿಸಿದ್ದಾರೆ.
ಬೆಳಗಾವಿ ನಗರದ ವಿವಿಧೆಡೆ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಿದ ಆರೋಪದಲ್ಲಿ ಬ್ರಹ್ಮನಗರದ ಸತೀಶ ಬೆನ್ನಾಳಿ(32) ಮತ್ತು ಉಮೇಶ ಪಾಲಕರ(38), ಮಜಗಾವಿಯ ವಿಕ್ರಮ ಹಂಡೆ(33) ಮತ್ತು ಪ್ರಸಾದ ಗಾವಡೆ(29), ಸಾಂಬ್ರಾದ ಅನಿಲ ಯಡ್ಡಿ, ಬಸವಣ್ಣಗಲ್ಲಿಯ ಅಕ್ಷಯ ಮೊರೆ(28)ವಿರುದ್ಧ ವಿವಿಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾರ್ವಜನಿಕ ಸ್ಥಳದಲ್ಲಿ ಮಟಕಾ ಆಡುತ್ತಿದ್ದ ವೇಳೆ ದಾಳಿ ಮಾಡಿರುವ ಟಿಳಕವಾಡಿ ಪೊಲೀಸರು ವಡಗಾವಿಯ ವಿನೋದ ಹೊಸೂರಕರ(42)ಹಾಗೂ ಈತನಿಂದ ಸಂಗ್ರಹವಾದ ಹಣ ಪಡೆಯುತ್ತಿದ್ದ ಮಾರುತಿ ಹುಂದ್ರೆಕರ ವಿರುದ್ಧ ದೂರು ದಾಖಲಿಸಿದ್ದಾರೆ.
ಮಚ್ಛೆ-ವಾಘವಾಡೆ ರಸ್ತೆಯಲ್ಲಿ ಮಾದಕ ವಸ್ತು ಸೇವಿಸಿ ಅಸಹಜವಾಗಿ ವರ್ತಿಸುತ್ತಿದ್ದ ಸವದತಿ ತಾಲೂಕು ಮುತವಾಡದ ಶಿವಾನಂದ ಬೊರಕ್ಕನವರ (32)ವಿರುದ್ಧ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ದಾಖಲಾಗಿದೆ.
---
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net