ನ್ಯಾಯಪರ ಬೇಡಿಕೆಗಳಿಗಾಗಿ ಹೋರಾಡಿ

ಹುಕ್ಕೇರಿ ಪಟ್ಟಣದ ಆಂಜನೇಯ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾಜಿ ಸಂಸದ ರಮೇಶ ಕತ್ತಿ ಅವರನ್ನು ಸನ್ಮಾನಿಸಲಾಯಿತು. ಮಹಾವೀರ ನಿಲಜಗಿ, ರವಿ ಕರಾಳೆ, ಗುರುರಾಜ ಕುಲಕರ್ಣಿ, ಮಲ್ಲಪ್ಪ ಬಿಸಿರೊಟ್ಟಿ ಇತರರಿದ್ದರು.
ಹುಕ್ಕೇರಿ ಪಟ್ಟಣದ ಆಂಜನೇಯ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾಜಿ ಸಂಸದ ರಮೇಶ ಕತ್ತಿ ಅವರನ್ನು ಸನ್ಮಾನಿಸಲಾಯಿತು. ಮಹಾವೀರ ನಿಲಜಗಿ, ರವಿ ಕರಾಳೆ, ಗುರುರಾಜ ಕುಲಕರ್ಣಿ, ಮಲ್ಲಪ್ಪ ಬಿಸಿರೊಟ್ಟಿ ಇತರರಿದ್ದರು.
Published on
ಪಟ್ಟಣದ ಆಂಜನೇಯ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ನೂತನ ಬಡಾವಣೆಗಳಿಗೆ ಮೂಲಸೌಲಭ್ಯ ಕಲ್ಪಿಸಲು ಕತ್ತಿ ಕುಟುಂಬ ಬದ್ಧವಾಗಿದೆ. ರಹವಾಸಿಗಳು ಸಂಘದ ಮೂಲಕ ಜನಪರ ಕಾರ್ಯಗಳನ್ನು ಹಮ್ಮಿಕೊಳ್ಳಬೇಕು. ಎಲ್ಲರೂ ಒಂದೇ ಕುಟುಂಬದವರಂತೆ ಜೀವಿಸುವ ಮೂಲಕ ಪರಸ್ಪರ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಶಿಕ್ಷಣ ಇಲಾಖೆ ಬಿಆರ್‌ಪಿ ನಾಗವೇಣಿ ಮಾತನಾಡಿ, ಹುಕ್ಕೇರಿ ಗತವೈಭವ ಮರುಕಳಿಸುವಂತೆ ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದರು. ಸಂಘದ ಅಧ್ಯಕ್ಷ ಸಂಜೀವ ವಂಜೀರೆ ಸಂಘದ ಉದ್ದೇಶಗಳನ್ನು ವಿವರಿಸಿದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಎರಡನೇ ಸ್ಥಾನ ಪಡೆದ ನಿಖಿತಾ ಮುದವೀರ ಅವರನ್ನು ಸನ್ಮಾನಿಸಲಾಯಿತು.
ವಿದ್ಯುತ್ ಸಹಕಾರ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ಮುಖಂಡರಾದ ರವಿ ಕರಾಳೆ, ಗುರುರಾಜ ಕುಲಕರ್ಣಿ, ಮಲ್ಲಪ್ಪ ಬಿಸಿರೊಟ್ಟಿ, ಬಸವರಾಜ ಗಂಗನ್ನವರ, ಲಾಜಮ್ ನಾಯಿಕವಾಡಿ, ಡಾ.ವಿಜಯ ಬಡಿಗೇರ, ರೇಖಾ ಚಿಕ್ಕೋಡಿ, ಸವಿತಾ ಏಣಗಿಮಠ, ಶರ್ಮಿಳಾ ಬಡಮಲ್ಲನವರ, ಶಾಂತಾ ಸೊಲ್ಲಾಪುರೆ, ಐ.ಡಿ.ಜಕಾತಿ, ಸಿ.ಎಂ.ದರಬಾರೆ, ಕೆಂಪಣ್ಣ ಮೋಶಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net