ಉತ್ತರ ಕರ್ನಾಟಕ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ 54 ಸಕ್ಕರೆ ಕಾರ್ಖಾನೆಗಳು, ಕಬ್ಬು ಬೆಳೆಗಾರರು ಕಬ್ಬು ಕಟಾವು, ಸಾಗಾಣಿಕೆ ಮಾಡಲು ಮಹಾರಾಷ್ಟ್ರದ ಕಾರ್ಮಿಕರ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಹೀಗಾಗಿ ಪ್ರತಿ ವರ್ಷ ಕಬ್ಬು ನುರಿಸುವ ಹಂಗಾಮಿಗೆ ಮಹಾರಾಷ್ಟ್ರದಿಂದ ಅಂದಾಜು 1,400 ಗ್ಯಾಂಗ್‌ಗಳು ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಿಗೆ ಕುಟುಂಬ ಸಮೇತ ಆಗಮಿಸುತ್ತಿವೆ. ಈ ಕಾರ್ಮಿಕರ ಗ್ಯಾಂಗ್‌ಗಳಿಗೆ ಸಕ್ಕರೆ ಕಾರ್ಖಾನೆಗಳು ಮತ್ತು ಕಬ್ಬು ಸಾಗಾಣಿಕೆ ಮಾಡುವ ಟ್ರಾೃಕ್ಟರ್‌ಗಳ ಮಾಲೀಕರು ಮುಂಗಡವಾಗಿ 10 ರಿಂದ 15 ಲಕ್ಷ ರೂ. ಹಣ ನೀಡುತ್ತವೆ. ಆದರೆ, ಬಹುತೇಕ ಗ್ಯಾಂಗ್‌ಗಳು ಬಾರದ ವಂಚನೆ ಮಾಡುತ್ತಿವೆ. ಇದರಿಂದಾಗಿ ಪ್ರತಿವರ್ಷ ಕೋಟ್ಯಂತರ ರೂ. ವಂಚನೆ ಆಗುತ್ತಿದೆ ಎಂದು ವಾಹನ ಮಾಲೀಕರಾದ ರಮೇಶ ಪಾಟೀಲ, ಪರುಶರಾಮ ಮಾದರ ದೂರಿದ್ದಾರೆ.