ಬೆಳಗಾವಿ: ಕೃಷಿಯಲ್ಲಿ ಮಿತಿಮೀರಿದ ಯೂರಿಯಾ ಹಾಗೂ ರಾಸಾಯನಿಕ ಬಳಸುತ್ತಿರುವುದರಿಂದ ಪರಿಸರ ಹಾಗೂ ಮಾನವನ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಭೂಮಿಯ ಫಲವತ್ತತೆ ಕಾಊಡ ಕ್ಷೀಣಿಸುತ್ತಿದ್ದು, ವ್ಯವಸ್ಥಿತ ಹಾಗೂ ವೈಜ್ಞಾನಿಕ ಕೃಷಿಯ ಅಗತ್ಯವಿದೆ ಎಂದು ಜಂಟಿ ಕೃಷಿ ನಿರ್ದೇಶಕ
ಎಚ್.ಡಿ.ಕೋಳೇಕರ ಹೇಳಿದರು.
ತಾಲೂಕಿನ ಧಾಮಣೆ (ಎಸ್) ಗ್ರಾಮದ ಪಿಕೆಪಿಎಸ್ ಆವರಣದಲ್ಲಿ ಈಚೆಗೆ ಏರ್ಪಡಿಸಿದ್ದ ಭೂಮಿ ತಾಯಿ ರಕ್ಷಣಾ ಕಣ್ಗಾವಲು ಸಮಿತಿ ಸಭೆ, ಬೀಜೋಪಚಾರ ಆಂದೋಲನ ಹಾಗೂ ಸುರಕ್ಷಿತ ಕೀಟನಾಶಕ ಬಳಕೆ ಕುರಿತು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್.ಪಟಗುಂದಿ, ಯೂರಿಯಾಗೆ ಪರ್ಯಾಯವಾಗಿ ಬಳಸಬಹುದಾದ ಸಂಯುಕ್ತ ರಸ ಗೊಬ್ಬರ ಹಾಗೂ ಕೆಎಲ್‌ಇ ಸಂಸ್ಥೆಯ ಮತ್ತಿಕೊಪ್ಪ ಕೆವಿಕೆ ವಿಜ್ಞಾನಿ ಎಸ್.ಎಂ.ವಾರದ, ಬೀಜೋಪಚಾರದ ಮಹತ್ವ, ವಿಧಾನ, ಪ್ರಯೋಜನ ಕುರಿತು ಮಾಹಿತಿ ನೀಡಿದರು.
ಪಿಕೆಪಿಎಸ್ ಅಧ್ಯಕ್ಷ ಶ್ರೀಮಂತಗೌಡ ಪಾಟೀಲ, ಪಿಡಿಒ ಸಿದ್ದು ಮರಾಠೆ, ಆತ್ಮಾ ತಾಲೂಕು ತಾಂತ್ರಿಕ ವ್ಯವಸ್ಥಾಪಕ ರಾಜಶೇಖರ ಭಟ್, ಕೃಷಿ ಸಖಿ ರಾಜಶ್ರೀ, ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್. ಪಟಗುಂದಿ ಇತರರಿದ್ದರು.