ಬೆಳೆಸಾಲ ಮನ್ನಾಕ್ಕಾಗಿ ರೈತರ ಪ್ರತಿಭಟನೆ

 ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ರೈತರು ಪ್ರತಿಭಟನೆ ನಡೆಸಿದರು. ಚೂನಪ್ಪ ಪೂಜೇರಿ, ಪ್ರಕಾಶ ನಾಯಕ, ಶಿವಾನಂದ ಮುಗಳಿಹಾಳ, ಸತ್ಯಪ್ಪ ಮಲ್ಲಾಪುರೆ ಇತರರಿದ್ದರು.
ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ರೈತರು ಪ್ರತಿಭಟನೆ ನಡೆಸಿದರು. ಚೂನಪ್ಪ ಪೂಜೇರಿ, ಪ್ರಕಾಶ ನಾಯಕ, ಶಿವಾನಂದ ಮುಗಳಿಹಾಳ, ಸತ್ಯಪ್ಪ ಮಲ್ಲಾಪುರೆ ಇತರರಿದ್ದರು.
Published on
ಬೆಳಗಾವಿ:ಬರ ಪೀಡಿತ ಪಟ್ಟಿಗೆ ಬೆಳಗಾವಿ ಜಿಲ್ಲೆ ಸೇರ್ಪಡೆ, ಬೆಳೆಹಾನಿ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಶುಕ್ರವಾರ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮುಂಗಾರಿನಲ್ಲಿ ನಿರೀಕ್ಷಿತ ಪ್ರಮಾನದಲ್ಲಿ ಮಳೆ ಆಗದಿರುವ ಕಾರಣ ಬಿತ್ತನೆ ಮಾಡಿರುವ ಹೆಸರು, ಶೇಂಗಾ, ಸೂರ್ಯಕಾಂತಿ, ಉದ್ದು, ಸೊಯಾಬಿನ್, ತೊಗರಿ ಸೇರಿ ವಿವಿಧ ಬೆಳಗಳು ಸಂಪೂರ್ಣ ನೀರಿಲ್ಲದೆ ಒಣಗಿ ಹೋಗಿ ಬೆಳೆನಷ್ಟ ಎದುರಿಸುತ್ತಿರುವ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದರೆ, ಸರ್ಕಾರದಿಂದ ಬೆಳೆಹಾನಿ ಪರಿಹಾರ ಸೇರಿ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ.
ಈಗಾಗಲೇ ರಾಜ್ಯ ಸರ್ಕಾರವು ರಾಜ್ಯಾದ್ಯಂತ ಬಹುತೇಕ ಜಿಲ್ಲೆಗಳನ್ನು ಬರಪಟ್ಟಿಗೆ ಸೇರ್ಪಡೆ ಮಾಡಿದೆ. ಆದರೆ, ಬೆಳಗಾವಿ ಜಿಲ್ಲೆಯನ್ನು ಬರ ಪಟ್ಟಿಯಿಂದ ಕೈಬಿಟ್ಟಿರುವುದು ಸರಿಯಾದ ಕ್ರಮವಲ್ಲ. ಬರದಿಂದ ಸಂಕಷ್ಟಕ್ಕೆ ಒಳಗಾಗಿರುವ ರೈತರಿಗೆ ಅನ್ಯಾಯವಾಗಿದ್ದು, ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸಬೇಕು. ಜಿಲ್ಲೆಯನ್ನು ಬರ ಪಟ್ಟಿಗೆ ಸೇರ್ಪಡೆ ಮಾಡಿ ಪ್ರತಿ ರೈತರ ಖಾತೆಗೆ 50 ಸಾವಿರ ರೂ. ವರೆಗೆ ಬೆಳೆಹಾನಿ ಪರಿಹಾರ ನೀಡಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಕಳೆದ ನಾಲ್ಕೈ ವರ್ಷಗಳಿಂದ ಅತಿವೃಷ್ಟಿ,ಅನಾವೃಷ್ಟಿಯಿಂದ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರೈತರಿಗೆ ಕೃಷಿ ಚಟುವಟಿಕೆಗಳಿಗಾಗಿ ಮಾಡಿರುವ ಬೆಳೆಸಾಲ ಮರು ಪಾವತಿಸಲು ಸಾಧ್ಯವಾಗುತ್ತಿಲ್ಲ. ಆದಾಯ ಇಲ್ಲದಿರುವ ಕಾರಣ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಹೀಗಾಗಿ ಸರ್ಕಾರ ಕೂಡಲೇ ಬೆಳೆಸಾಲ ಮನ್ನಾ ಮಾಡಬೇಕು. ನೀರಾವರಿ ಪ್ರದೇಶದಲ್ಲಿ ಬೆಳೆಗಳನ್ನು ಉಳಿಸಲು ದಿನದ 12 ಗಂಟೆಗಳ ಕಾಲ ತ್ರಿಪೇಸ್ ವಿದ್ಯುತ್ ಪೂರೈಕೆ ಮಾಡಲು ಕ್ರಮ ವಹಿಸಬೇಕು ಮನವಿ ಮೂಲಕ ವಿನಂತಿಸಿದರು.
ಜಿಲ್ಲೆಯ ಎಲ್ಲ ನೀರಾವರಿ ಯೋಜನೆಗಳನ್ನು ತಕ್ಷಣ ಆರಂಭಿಸಿ, ಕಟ್ಟಕಡೆಯ ಹಳ್ಳಿಯವರೆಗೂ ನೀರು ತಲುಪುವಂತೆ ಕ್ರಮ ಕೈಗೊಳ್ಳಬೇಕು. ರೈತರ ಸಮಸ್ಯೆಗಳನ್ನು ನಿರ್ಲಕ್ಷಿಸದೆ ಸರ್ಕಾರ ಕೂಡಲೇ ಸೂಕ್ತ ನಿರ್ಧಾರ ಕೈಗೊಂಡು ಪರಿಹಾರ ಒದಗಿಸಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು.
ಚೂನಪ್ಪ ಪೂಜೇರಿ, ಪ್ರಕಾಶ ನಾಯಕ, ಶಿವಾನಂದ ಮುಗಳಿಹಾಳ, ಸತ್ಯಪ್ಪ ಮಲ್ಲಾಪುರೆ, ಪ್ರೇಮ ಚೌಗುಲಾ, ವಾಸು ಪಾಡ್ರೋಳಿ, ಲಕ್ಷ್ಮಣ ದಂಡಾಪುರ, ಮಂಜುನಾಥ ಪೂಜೇರಿ, ಸಂಜು ಹಾವನ್ನೂರ, ಗೋಪಾಲ ಕುಕ್ಕನೂರ, ಶಿವಾನಂದ ದೊಡ್ಡವಾಡ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net