ಎಲೆಕೋಸು ನಾಶಪಡಿಸಿ ರೈತರ ಆಕ್ರೋಶ

ಬೆಳಗಾವಿ ತಾಲೂಕಿನ ಕಡೋಲಿಯಲ್ಲಿ ಬುಧವಾರ ರೈತರ ಜಮೀನಿನಲ್ಲಿನ ಎಲೆಕೋಸು ಬೆಳೆಯನ್ನು ರೂಟರ್‌ನಿಂದ ನಾಶಪಡಿಸಲಾಯಿತು.
ಬೆಳಗಾವಿ ತಾಲೂಕಿನ ಕಡೋಲಿಯಲ್ಲಿ ಬುಧವಾರ ರೈತರ ಜಮೀನಿನಲ್ಲಿನ ಎಲೆಕೋಸು ಬೆಳೆಯನ್ನು ರೂಟರ್‌ನಿಂದ ನಾಶಪಡಿಸಲಾಯಿತು.
Published on
ಬೆಳಗಾವಿ : ಮಾರುಕಟ್ಟೆಯಲ್ಲಿ ವಿವಿಧ ತರಕಾರಿಗಳ ಬೆಲೆ ಕುಸಿತ ಹಾಗೂ ಖರೀದಿಯಾಗದೇ ಹಾಗೆಯೇ ಮಾರುಕಟ್ಟೆಯಲಿ ಕೃಷಿ ಉತ್ಪನ್ನಗಳು ಉಳಿಯುತ್ತಿರುವುದರಿಂದ ರೋಸಿ ಹೋದ ಜಿಲ್ಲೆಯ ರೈತರು ಈಗ ತಮ್ಮ ತರಕಾರಿ ಬೆಳೆಗಳನ್ನು ಗದ್ದೆಯಲ್ಲೇ ನಾಶಪಡಿಸುವ ಕಠೋರ ನಿರ್ಧಾರ ತೆಗೆದುಕೊಂಡಿದ್ದು, ಬುಧವಾರ ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದಲ್ಲಿ ಎರಡು ಎಕರೆಯಲ್ಲಿನ ಎಲೆಕೋಸು ಬೆಳೆಯ ಮೇಲೆ ರೂಟರ್ ಹೊಡೆದು ನಾಶಪಡಿಸಲಾಗಿದೆ.
ಕಡೋಲಿಯ ಮೋಹನ ಕಡೇಮನಿ ಮತ್ತು ಮಾರುತಿ ಕಡೇಮನಿ ಎಂಬ ಸೋದರರು, ಪ್ರತಿ ವರ್ಷದಂತೆ ಈ ಸಲವೂ ಎಲೆಕೋಸು ಬೆಳೆದಿದ್ದರು. ಆದರೆ ಆರಂಭದಿಂದಲೂ ಬೆಲೆ ಕೈ ಹಿಡಿದಿರಲಿಲ್ಲ. ಈಚೆಗೆ ಯುದ್ಧದ ಕಾರಣಕ್ಕೆ ಮಾರುಕಟ್ಟೆಯಲ್ಲಿ ಎಲೆಕೋಸು ಖರೀದಿಸುವವರೆ ಇಲ್ಲವಾಗಿದ್ದು, ಕೇವಲ 2ರೂ.ಗೆ ಕೆಜಿ ಕೇಳುತ್ತಿದ್ದರು. ಅದು ಕೂಡ ಎಲ್ಲವೂ ಖರೀದಿಯಾಗುತ್ತಿರಲಿಲ್ಲ. ಅರ್ಧ ಕೊಟ್ಟು, ಅರ್ಧ ಮಾರುಕಟ್ಟೆಯಲ್ಲೇ ಸುರಿದು ಬರುವ ಪರಿಸ್ಥಿತಿ ಎದುರಿಸಿದ್ದರು.
ಬಿತ್ತನೆ ಬೀಜ, ಗೊಬ್ಬರ, ನೀರು ಮತ್ತು ಕೂಲಿ ಸೇರಿದಂತೆ ಸಾವಿರಾರು ರೂ.ಖರ್ಚು ಮಾಡಿ ಬೆಳೆ ತೆಗೆದು, ಮಾರುಕಟ್ಟೆಗೆ ಹೋಗಿ ಸುರಿದು ಬರುವ ಬದಲಿಗೆ, ಜಮೀನಿನಲ್ಲೇ ಗೊಬ್ಬರವಾಗಿ ಹೋಗಲಿ ಎಂದು ನಿರ್ಧರಿಸಿದ ರೈತರು ಬುಧವಾರ ರೂಟರ್ ಹೊಡೆದು ಎಲ್ಲ ಎಲೆಕೋಸು ಬೆಳೆಯನ್ನು ಗದ್ದೆಯಲ್ಲೇ ನಾಶ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net