ಬರದಿಂದ ತೀವ್ರ ಸಂಕಷ್ಟದಲ್ಲಿ ರೈತರು

ಬೆಳಗಾವಿ ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಎನ್.ರವಿಕುಮಾರ ಮಾತನಾಡಿದರು. ಅಭಯ ಪಾಟೀಲ, ವಿಠ್ಠಲ ಹಲಗೇಕರ್, ಅನಿಲ ಬೆನಕೆ, ಸುಭಾಷ ಪಾಟೀಲ ಇತರರಿದ್ದರು.
ಬೆಳಗಾವಿ ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಎನ್.ರವಿಕುಮಾರ ಮಾತನಾಡಿದರು. ಅಭಯ ಪಾಟೀಲ, ವಿಠ್ಠಲ ಹಲಗೇಕರ್, ಅನಿಲ ಬೆನಕೆ, ಸುಭಾಷ ಪಾಟೀಲ ಇತರರಿದ್ದರು.
Published on
ಬೆಳಗಾವಿ:ರಾಜ್ಯದಲ್ಲಿ ಮಳೆ ಕೊರತೆ, ಹವಾಮಾನ ವೈಪರಿತ್ಯ ಕಾರಣಗಳಿಂದಾಗಿ ರೈತರು, ಕೂಲಿಕಾರರು, ಜನಸಾಮಾನ್ಯರು ಬರಗಾಲದಂತ ಸ್ಥಿತಿ ಎದುರಿಸುತ್ತಿದ್ದಾರೆ. ಆದರೆ, ಕಾಂಗ್ರೆಸ್ ಸರ್ಕಾರವು ಬರ ಘೋಟಣೆ ಮಾಡುತ್ತಿಲ್ಲ. ಬೆಳೆ ಹಾನಿ ಪರಿಹಾರ ಕೂಡ ನೀಡುತ್ತಿಲ್ಲ ಎಂದು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ ಟೀಕಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಳಗಾವಿ ಜಿಲ್ಲೆಯಲ್ಲಿ ಬೈಲಹೊಂಗಲ, ಯರಗಟ್ಟಿ, ರಾಮದುರ್ಗ, ಸವದತ್ತಿ ತಾಲೂಕು ಸೇರಿ ವಿವಿಧ ಭಾಗಗಳಲ್ಲಿ ಬರ ಪರಿಸ್ಥಿತಿ ವೀಕ್ಷಣೆ ಮಾಡಿದ್ದು, ರೈತರ ಸ್ಥಿತಿ ಸಂಕಷ್ಟಕ್ಕೆ ಒಳಗಾಗಿದ್ದು, ಬಿತ್ತನೆಗಾಗಿ ಮಾಡಿದ ಸಾಲವನ್ನು ಮರುಪಾವತಿಸಲು ಸಾಧ್ಯವಾಗದಂತಹ ಸ್ಥಿತಿಗೆ ತಲುಪಿದ್ದಾರೆ. ಕೆಲ ಭಾಗದಲ್ಲಿ ಭೂಮಿಯಲ್ಲಿ ಬೆಳೆಯಿದೆ ಆದರೆ,ಕಾಳು ಕಟ್ಟಿಲ್ಲ.ಇನ್ನೂ ಕೆಲ ಭಾಗದಲ್ಲಿ ಬಿತ್ತನೆ ಆಗದೆ ಭೂಮಿ ಪಾಳುಬಿದ್ದಿದೆ. ಆದರೆ, ಸರ್ಕಾರ ರೈತರಿಗೆ ತಕ್ಷಣ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ರಾಮದುರ್ಗದಲ್ಲಿ ಕುರಿಗಳಿಗೆ ಕುಡಿಯಲು ನೀರಿಲ್ಲ,ಂದರಗಿ ಕೆರೆ ತುಂಬಿಸಲು ಹಣ ಖರ್ಚು ಮಾಡಿದ್ದರೂ ಕೆರೆಗೆ ನೀರು ಬಂದಿಲ್ಲ. ಸಾಲಾಪುರ ಏತ ನೀರಾವರಿ ಯೋಜನೆ ಇನ್ನೂ ಕಾರ್ಯಾರಂಭ ಮಾಡಿಲ್ಲ. ಈ ಯೋಜನೆಯಿಂದ 60ಕ್ಕೂ ಹೆಚ್ಚು ಹಳ್ಳಿಗಳಿಗೆ ಅನಾನುಕೂಲವಾಗಿದೆ. ಸಿದ್ದರಾಮಯ್ಯ ಅವಧಿಯಲ್ಲೇ ಉದ್ಘಾಟನೆಯಾದ ಯೋಜನೆ ಇನ್ನೂ ಜನರಿಗೆ ಉಪಯೋಗವಾಗಿಲ್ಲ.ಕಟಕೋಳದಲ್ಲಿ ಶೇಂಗಾ ಬೆಳೆ ಸಂಪೂರ್ಣ ಹಾನಿಯಾಗಿದೆ. ಸರ್ಕಾರ ವಿಷ ಕೊಟ್ಟರೂ ಕುಡಿದು ಸಾಯುತ್ತೇವೆ ಎಂದು ರೈತರು ನೋವು ತೋಡಿಕೊಂಡಿದ್ದಾರೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಸರ್ಕಾರ ಬರ ಘೋಷಣೆ ಮಾಡದಿರುವುದು ಖಂಡನೀಯ ಎಂದರು.
ರಾಜ್ಯ ಸರ್ಕಾರವು ಕೂಡಲೇ ಬರ ಘೋಷಣೆ ಮಾಡಿ ಎಕರೆ 50 ಸಾವಿರ ರೂ. ಪರಿಹಾರ ನೀಡಬೇಕು. ಆರ್ಥಿಕ ಸಂಕಷ್ಟದಲ್ಲಿರುವ ರೈತರ ಬೆಳೆಸಾಲ ಮನ್ನಾ ಮಾಡಲು ಕ್ರಮ ವಹಿಸಬೇಕು. ಆದರೆ, ಸರ್ಕಾರವುರೈತರ ಹೊಲ-ಮನೆಗಳಿಗೆ ಹೋಗಬೇಕಿದ್ದ ಮುಖ್ಯಮಂತ್ರಿ ಅಸಮಾಧಾನಿತ ಶಾಸಕರ ಮನೆಗೆ ಹೋಗುತ್ತಿದ್ದಾರೆ. ಮೊದಲು ರೈತರ ಸಮಸ್ಯೆ ಆಲಿಸಲು ಮುಖ್ಯಮಂತ್ರಿ ಹೊಲಗಳಿಗೆ ತೆರಳಬೇಕು ಎಂದು ಒತ್ತಾಯಿಸಿದರು.
ಶಾಸಕರಾದ ಅಭಯ ಪಾಟೀಲ, ವಿಠ್ಠಲ ಹಲಗೇಕರ್, ಮಾಜಿ ಶಾಸಕ ಅನಿಲ ಬೆನಕೆ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ ಇತರರಿದ್ದರು.
.............
ಕೋಟ್ಸ್
ರಾಜ್ಯದಲ್ಲಿ ರಚನೆಯಾಗಿರುವ ನೂತನ ಸಚಿವ ಸಂಪುಟದಲ್ಲಿ ಬಹುತೇಕರು ಪೇಮೆಂಟ್ ಕೋಟಾದಡಿ ಆಯ್ಕೆಯಾಗಿದ್ದಾರೆ. ಹೀಗಾಗಿ ಸಚಿವರು ಬೇಡಿಕೆಯಿಟ್ಟಿರುವ ಖಾತೆಗಳನ್ನು ನೀಡಲು ಸಾಧ್ಯವಾಗದೆ ಸಿಎಂ ಡಿ.ಕೆ.ಶಿವಕುಮಾರ ಪರದಾಡುತ್ತಿದ್ದಾರೆ. ಇಂತಹ ಸರ್ಕಾರ, ಸಚಿವರಿಂದ ರಾಜ್ಯದ ಅಭಿವೃದ್ಧಿ ನಿರೀಕ್ಷೆಯಿಟ್ಟುಕೊಳ್ಳುವುದು ತಪ್ಪು.
-ಎನ್.ರವಿಕುಮಾರ, ವಿಧಾನಪರಿಷತ್
...........
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net