ರೈತರು, ಸೈನಿಕರು ನಿಜವಾದ ಯೋಧರು

ಬೆಳಗಾವಿಯಲ್ಲಿ ಭಾನುವಾರ ಜರುಗಿದ ಕಾರ್ಗಿಲ್ ವಿಜಯ ದಿನವನ್ನು ಕವಿತಾ ಮಿಶ್ರಾ ಉದ್ಘಾಟಿಸಿದರು. ಜಗದೀಶ ಪೂಜೇರಿ, ಸುಭಾಸ ಪಾಟೀಲ,  ಪರ್ವೇಜ್ ಹವಾಲ್ದಾರ,  ಈರಣ್ಣ ರೊಟ್ಟಿ, ರಮೇಶ ಚೌಗಲಾ,ಡಾ.ಸತೀಶ ಚೌಲಿಗೇರಿ ಇತರರಿದ್ದರು.
ಬೆಳಗಾವಿಯಲ್ಲಿ ಭಾನುವಾರ ಜರುಗಿದ ಕಾರ್ಗಿಲ್ ವಿಜಯ ದಿನವನ್ನು ಕವಿತಾ ಮಿಶ್ರಾ ಉದ್ಘಾಟಿಸಿದರು. ಜಗದೀಶ ಪೂಜೇರಿ, ಸುಭಾಸ ಪಾಟೀಲ, ಪರ್ವೇಜ್ ಹವಾಲ್ದಾರ, ಈರಣ್ಣ ರೊಟ್ಟಿ, ರಮೇಶ ಚೌಗಲಾ,ಡಾ.ಸತೀಶ ಚೌಲಿಗೇರಿ ಇತರರಿದ್ದರು.
Published on
ಬೆಳಗಾವಿ : ರೈತರು ಹಾಗೂ ಸೈನಿಕರು ದೇಶದ ನಿಜವಾದ ಯೋಧರು. ಅನ್ನದಾತರು ಮತ್ತು ಗಡಿಕಾಯುವ ಯೋಧರಿಗೆ ಸಮಾನ ಗೌರವ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯ. ದೇಶದ ಗಡಿಯಲ್ಲಿ ಹಗಲಿರುಳು ಸೇವೆ ಸಲ್ಲಿಸುವ ಸೈನಿಕರ ತ್ಯಾಗದಿಂದಲೇ ದೇಶದ ಜನ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಆದ್ದರಿಂದ ಸೈನಿಕರು ಮತ್ತು ಅವರ ಕುಟುಂಬಗಳಿಗೆ ಸಮಾಜ ನಿರಂತರ ಗೌರವ ನೀಡಬೇಕು ಎಂದು ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರಾ ಅವರು ಹೇಳಿದರು.
ಮಾಜಿ ಸೈನಿಕರ ಸಂಘಟನೆಗಳ ಮಹಾ ಒಕ್ಕೂಟದಿಂದ ಧರ್ಮನಾಥ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಗಿಲ್ ವಿಜಯೋತ್ಸವದ ಉದ್ಘಾಟಿಸಿ, ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.
ಸಮಾರಂಭದಲ್ಲಿ ಸಾಧಕ ನಿವೃತ್ತ ಯೋಧರಿಗೆ ಸೈನಿಕ ರತ್ನ ಪ್ರಶಸ್ತಿ ಪ್ರದಾನ, ಅತ್ಯುತ್ತಮ ಶಿಕ್ಷಕರು, ವೈದ್ಯರು ಹಾಗೂ ಪ್ರಗತಿಪರ ರೈತರಿಗೆ ಸನ್ಮಾನ, ಕಾರ್ಗಿಲ್ ಹುತಾತ್ಮರಿಗೆ ಶ್ರದ್ಧಾಂಜಲಿ, ಅಮರ ಜವಾನ್ ಜ್ಯೋತಿಗೆ ಪುಷ್ಪನಮನ ಸಲ್ಲಿಸಲಾಯಿತು.
ಸಂಸದ ಜಗದೀಶ ಶೆಟ್ಟರ, ಒಕ್ಕೂಟದ ಜಿಲ್ಲಾಧ್ಯಕ್ಷ ಜಗದೀಶ ಪೂಜೇರಿ, ಈರಣ್ಣ ರೊಟ್ಟಿ, ರಮೇಶ ಚೌಗಲಾ, ಸಂಗಪ್ಪ ಮೇಟಿ, ಶಿವಬಸಪ್ಪ ಕಾಡನ್ನವರ, ಮಹೇಶ ಕಂಬಾರ, ಸುನೀತಾ ಪಟ್ಟಣಶೆಟ್ಟಿ, ಅನಿತಾ ಮಿರ್ಜಿ, ಪರ್ವೇಜ್ ಹವಾಲ್ದಾರ, ಡಾ.ಸತೀಶ ಚೌಲಿಗೇರಿ, ಲಕ್ಷ್ಮೀಬಾಯಿ ಬಡಸ, ಸುಭಾಸ ಪಾಟೀಲ, ರಾಮನಗೌಡ ಪಾಟೀಲ, ಡಾ.ಚಂಪಾ ಕೊಪ್ಪದ, ಡಾ.ಅಮೋಘ ಜಂಬಗಿ, ಅಶೋಕ ಮಜಗಿ, ತಹಶೀಲ್ದಾರ ಕಲಗೌಡ ಪಾಟೀಲ, ಈರಣ್ಣ ದೆಯನ್ನವರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net