ಮಾಂಜರಿ: ಚಿಕ್ಕೋಡಿಯ ಚಿದಾನಂದ ಬಸಪ್ರಭು ಕೋರೆ ಸಹಕಾರ ಸಕ್ಕರೆ ಕಾರ್ಖಾನೆಯ ಕಬ್ಬು ಅಭಿವದ್ಧಿ ವಿಭಾಗದಿಂದ ಮಾರ್ಗದರ್ಶನ ಹಾಗೂ ಸೌಲಭ್ಯ ಪಡೆದ ರಾಯಬಾಗ ತಾಲೂಕು ನಂದಿಕುರಳಿ ಗ್ರಾಮದ ರೈತ ಅಣ್ಣಪ್ಪ ಬಾಳಪ್ಪ ನಾಯಕ ಎಕರೆಗೆ 100 ಟನ್ ಕಬ್ಬು ಬೆಳೆದು ಸಾಧನೆ ಮಾಡಿದ್ದಾರೆ. ಕಾರ್ಖಾನೆ ಆಡಳಿತ ಮಂಡಳಿ ಪರವಾಗಿ ವ್ಯವಸ್ಥಾಪಕ ನಿರ್ದೇಶಕ ಬಿ.ಆರ್.ಖಂಡಗಾವಿ ಹಾಗೂ ಪ್ರಧಾನ ವ್ಯವಸ್ಥಾಪಕ ಎನ್.ಎಸ್.ಹಿರೇಮಠ ಕಬ್ಬು ಬೆಳೆದ ತೋಟಕ್ಕೆ ಭೇಟಿ ನೀಡಿ ರೈತನನ್ನು ಸೋಮವಾರ ಅಭಿನಂದಿಸಿದರು.
ವ್ಯವಸ್ಥಾಪಕ ನಿರ್ದೇಶಕ ಬಿ.ಆರ್.ಖಂಡಗಾವಿ ಮಾತನಾಡಿ, ಕಾರ್ಖಾನೆ ರೂವಾರಿ, ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹಾಗೂ ರಾಷ್ಟ್ರೀಯ ಸಕ್ಕರೆ ಕಾರ್ಖಾನೆ ಮಹಾಮಂಡಳ ನಿರ್ದೇಶಕ ಅಮಿತ ಕೋರೆ ಹಾಗೂ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ನಿರ್ದೇಶನದಂತೆ ಕಬ್ಬು ಅಭಿವದ್ಧಿ ಯೋಜನೆಗೆ ಒತ್ತು ನೀಡಲಾಗಿದೆ. ಎಲ್ಲ ಸದಸ್ಯ ರೈತರು ಕಬ್ಬು ಅಭಿವದ್ಧಿ ಯೋಜನೆಗಳ ಸದುಪಯೋಗ ಪಡೆಯಬೇಕು ಎಂದರು.
ಸಕ್ಕರೆ ಕಾರ್ಖಾನೆ ವತಿಯಿಂದ ಮಣ್ಣು ಹಾಗೂ ನೀರು ಪರಿಕ್ಷೆಯನ್ನು ಉಚಿತವಾಗಿ ನಡೆಸಲಾಗುತ್ತದೆ. ಗುಣಮಟ್ಟದ ಬೀಜ ಆಯ್ಕೆಯಿಂದ ಕಬ್ಬು ಕಟಾವಿನವರೆಗೆ ಎಲ್ಲ ಹಂತದಲ್ಲೂ ಮಾರ್ಗದರ್ಶನ ನೀಡಲಾಗುತ್ತದೆ. ಪೂರಕವಾಗಿ ಕಿಸಾನ್ ಬಜಾರ್‌ನಿಂದ ಗುಣಮಟ್ಟದ ರಸಗೊಬ್ಬರ, ಕೀಟನಾಶಕ, ಕಬ್ಬಿನ ಬೀಜ ಮತ್ತು ಸಸಿಗಳನ್ನು ಸಾಲದ ರೂಪದಲ್ಲಿ ಹಾಗೂ ಯೋಗ್ಯದರದಲ್ಲಿ ಒದಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕಾರ್ಖಾನೆ ಪ್ರಧಾನ ವ್ಯವಸ್ಥಾಪಕ ಎನ್.ಎಸ್.ಹಿರೇಮಠ ಕಬ್ಬು ಅಭಿವದ್ಧಿ ಮೇಲ್ವಿಚಾರಕರಾದ ರಾಹುಲ ಇಚಲಕರಂಜಿ, ಸಚಿನ ಮೋಪಗಾರ, ಎನ್.ಐ.ಪಾಟೀಲ, ಎಸ್.ಎಸ್.ಖೋತ, ರೈತರು ಹಾಜರಿದ್ದರು.
"
ಗ್ರಾಮೀಣ ಭಾಗದ ರೈತರು ಚಿದಾನಂದ ಬಸಪಭು ಕೋರೆ ಕಾರ್ಖಾನೆ ಹಾಗೂ ಶಿವಶಕ್ತಿ ಶುಗರ್ಸ್ ಸಲಹೆ ಹಾಗೂ ಸೌಲಭ್ಯ ಪಡೆದು ಇಳುವರಿ ಹೆಚ್ಚಿಸಿಕೊಳ್ಳಬೇಕು. ಕಾರ್ಖಾನೆಯಿಂದ ಆರಭಿಸಲಾದ ಕಿಸಾನ್ ಬಜಾರ್‌ನಲ್ಲಿ ಕಷಿ ಸಲಕರಣೆಗಳು, ಬೀಜ, ಗೊಬ್ಬರ ಮಾರುಕಟ್ಟೆಗಿಂತ ಕಡಿಮೆ ದರದಲ್ಲಿ ಲಭ್ಯವಿದ್ದು, ಸದುಪಯೋಗಪಡೆದು ಆರ್ಥಿಕ ಸುಸ್ಥಿರತೆ ಸಾಧಿಸಬೇಕು.
"
ಚಿದಾನಂದ ಬಸಪ್ರಭು ಕೋರೆ ಸಹಕಾರ ಸಕ್ಕರೆ ಕಾರ್ಖಾನೆ ಹಾಗೂ ಶಿವಶಕ್ತಿ ಶುಗರ್ಸ್ ಕ್ಷೇತ್ರ ವ್ಯಾಪ್ತಿಯಲ್ಲಿ ಇಳುವರಿ ಹೆಚ್ಚಿಸಲು ಪ್ರಯತ್ನ ಮಾಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಹೊಸ ತಳಿ ಸಂಶೋಧನೆ, ಇಳುವರಿ ಹೆಚ್ಚಿಸಲು ಪ್ರೋತ್ಸಾಹ ನೀಡಲಾಗುವುದು. ರೈತರು ಉಭಯ ಕಾರ್ಖಾನೆಗಳನ್ನು ಸಂಪರ್ಕಿಸಿ, ಸಲಹೆ ಪಡೆಯಬಹುದು.