ಬೆಳಗಾವಿ ಐ ಮೇಲೆ ಕಣ್ಣು

ಬೆಳಗಾವಿಯ ಶರ್ಕತ್ ಪಾರ್ಕ್‌ನ ಸೆಲ್ಫಿ ಸ್ಪಾಟ್ ಮತ್ತು ಹಿಂಬದಿಯಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮರಾ.
ಬೆಳಗಾವಿಯ ಶರ್ಕತ್ ಪಾರ್ಕ್‌ನ ಸೆಲ್ಫಿ ಸ್ಪಾಟ್ ಮತ್ತು ಹಿಂಬದಿಯಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮರಾ.
Published on
ಡಿ.ವಿ.ಕಮ್ಮಾರ ಬೆಳಗಾವಿ
ಕೇಂದ್ರ ಸರ್ಕಾರ ಅಧಿಕೃತವಾಗಿ ‘ಬೆಳಗಾವಿ’ ಬಳಕೆಗೆ ಆದೇಶ ಹೊರಡಿಸಿ ಹಲವು ವರ್ಷಗಳಾದವು. ಆದರೆ ಇಂದಿಗೂ ಅನೇಕರಿಗೆ ಮರಾಠಿ ಮೂಲದ ‘ಬೆಳಗಾಂವ’ ಬೇಕು ಹೊರತು ಬೆಳಗಾವಿ ಅರಗಿಸಿಕೊಳ್ಳಲು ಆಗುವುದಿಲ್ಲ. ಇದೇ ಕಾರಣಕ್ಕೆ ಅನೇಕ ಫಲಕಗಳಲ್ಲಿ ಇಂಗ್ಲಿಷ್‌ನಲ್ಲಿರುವ ಕೊನೆಯ ‘ಐ’ ಕಿತ್ತು ಕಿತಾಪತಿ ಮಾಡುತ್ತಲೇ ಇರುತ್ತಾರೆ. ಇಂತಹ ಕುಹಕ ಬುದ್ಧಿಯ ಕೃತ್ಯಕ್ಕೆ ಕಡಿವಾಣ ಹಾಕುವುದಕ್ಕಾಗಿಯೇ ದಂಡುಮಂಡಳಿ ಫಲಕದ ಮೇಲೆ ಸಿಸಿಟಿವಿ ಕ್ಯಾಮರಾ ಕಣ್ಗಾವಲಿಟ್ಟಿದೆ.
ನಗರದ ಕ್ಯಾಂಪ್ ಪ್ರದೇಶದ ಶರ್ಕತ್ ಉದ್ಯಾನದಲ್ಲಿ 3 ಕಿಮೀನಷ್ಟು ವಾಕಿಂಗ್ ಪಥವಿದೆ. ಉದ್ಯಾನದೊಳಗೆ ಪ್ರಶಾಂತ ವಾತಾವರಣ, ಅಪರೂಪದ ಸಸ್ಯ ಸಮೂಹವಿದೆ. ನಿತ್ಯ ನೂರಾರು ಜನ ಆಗಮಿಸುತ್ತಾರೆ. ಈಚೆಗೆ ಸೆಲ್ಫಿ ಕ್ರೇಜ್ ಹೆಚ್ಚಾಗಿರುವುದನ್ನು ಪರಿಗಣಿಸಿ, ತಿಮ್ಮಯ್ಯ ರಸ್ತೆ ಬದಿಯಲ್ಲಿ ‘ಐ ಲವ್ ಬೆಳಗಾವಿ’ ಫಲಕವನ್ನು ದಂಡು ಮಂಡಳಿಯಿಂದ ಏಪ್ರಿಲ್ ಮೂರನೇ ವಾರದಲ್ಲಿ ಅಳವಡಿಸಿ, ಸೆಲ್ಫಿ ಸ್ಪಾಟ್ ಮಾಡಿದ್ದರು. ಎರಡ್ಮೂರು ದಿನದಲ್ಲಿ ಕಿಡಿಗೇಡಿಗಳು ‘ಐ’ ಕಿತ್ತು ಬೆಳಗಾಂವ ಮಾಡಿದ್ದರು. ತಕ್ಷಣವೇ ‘ಐ’ ಅಳವಡಿಸಿದ್ದರಾದರೂ ಅದೇ ದಿನ ರಾತ್ರಿ ಮತ್ತೇ ‘ಐ’ ಕಿತ್ತಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ದಂಡು ಮಂಡಳಿ ಮೂರನೇ ಸಲ ‘ಐ’ ಅಳವಡಿಸಿದ ಬಳಿಕ ಫಲಕಕ್ಕಾಗಿಯೇ ಸಿಸಿಟಿವಿ ಕ್ಯಾಮರಾ ಅಳವಡಿಸಿ ಕಣ್ಗಾವಲಿಟ್ಟಿದ್ದಾರೆ.
ರಾಜಪತ್ರದಲ್ಲಿ ‘ಬೆಳಗಾವಿ’ ಅಧಿಕೃತಗೊಂಡ ಬಳಿಕವೂ ದಂಡು ಮಂಡಳಿ ಬೆಳಗಾಂವ ಎಂದೇ ಮುಂದುವರಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಹೋರಾಟಗಳಾಗಿ, ಕೇಂದ್ರ ಸರ್ಕಾರದ ಗಮನಕ್ಕೆ ತಂದ ಬಳಿಕ ‘ಬೆಳಗಾವಿ’ ಎಂಬುದನ್ನೇ ಅಧಿಕೃತಗೊಳಿಸಿರುವ ಮಂಡಳಿ, ತನ್ನ ಆಡಳಿತದ ದಾಖಲೆಗಳಲ್ಲಿ ಕನ್ನಡೀಕರಣದ ಹೆಸರನ್ನೇ ಬಳಸುತ್ತಿದೆ. ನಗರದಲ್ಲಿರುವ ಎಲ್ಲ ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಡತಗಳಲ್ಲಿ, ಫಲಕಗಳಲ್ಲಿ ಈಗ ಬೆಳಗಾವಿಯೇ ಮುಂದುವರಿದಿದೆ. ಆದರೂ ಭಾಷಾ ದ್ವೇಷಿಗಳಿಗೆ ಇದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಅದಕ್ಕಾಗಿಯೇ ಆಗಾಗ ಇಂತಹ ಕೃತ್ಯ ಮಾಡುತ್ತಿರುತ್ತಾರೆ.
ಸದ್ಯ ಫಲಕಕ್ಕೆ ಕ್ಯಾಮರಾ ಕಣ್ಗಾವಲು ಹಾಕಿ ಒಂದು ವಾರದ ಮೇಲಾಯ್ತು, ಫಲಕ ಮುಟ್ಟುವ ಧೈರ್ಯ ಯಾರೂ ಮಾಡಿಲ್ಲ. ಈ ಮೂಲಕ ಭಾಷಾ ದ್ವೇಷಿಗಳ ಕುಕೃತ್ಯಕ್ಕೆ ಕಡಿವಾಣ ಹಾಕಿದಂತಾಗಿದೆ.
ℹ️

ಐತಿಹಾಸಿಕ ಹಿನ್ನೆಲೆ 

ಮೊದಲನೇ ಮಹಾಯುದಟಛಿದಲ್ಲಿ ಇರಾಕ್ (ಅಂದಿನ ಮೆಸೊಪೊಟೊಮಿಯಾ)ನ ಶರ್ಕತ್‌ನಲ್ಲಿ ಬ್ರಿಟಿಷ್ ಮತ್ತು ಭಾರತೀಯ ಸೈನಿಕರು 1918ರಲ್ಲಿ ಒಟ್ಟೋಮನ್ ಪಡೆಗಳನ್ನು ಸೋಲಿಸಿದ್ದರು. ಇದರಲ್ಲಿ ಹುತಾತ್ಮರಾದ ಭಾರತೀಯ ಸೈನಿಕರ ಸ್ಮರಣಾರ್ಥ ಶರ್ಕತ್ ಪಾರ್ಕ್‌ನ್ನು ಬ್ರಿಟಿಷ್ ಕಾಲಾವಧಿಯಲ್ಲೇ ಸ್ಥಾಪಿಸಿ, ಅಭಿವೃದಿಟಛಿಪಡಿಸಲಾಗಿದೆ. ಉದ್ಯಾನದೊಳಗೆ ನೈಸಗಿರ್ಕ ಕಾಲುವೆ ಹರಿದಿದ್ದು, ಈಚೆಗೆ ದಂಡು ಮಂಡಳಿಯಿಂದ ಸುಂದರೀಕರಣ ಮಾಡಿದ ಬಳಿಕ ಆಕರ್ಷಣೆಯ ತಾಣವಾಗಿದೆ



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net