ಕಣ್ಣಿನ ಆರೋಗ್ಯ ಜಾಗೃತಿ ಅವಶ್ಯ

ತೆಲಸಂಗ ಗ್ರಾಮದ ಪ್ರಾಥಮಿಕ ಕಷಿ ಪತ್ತಿನ ಸಹಕಾರಿ ಸಂಘದಲ್ಲಿ ಸಹಕಾರ ಸಪ್ತಾಹದ ಅಂಗವಾಗಿ ನೇತ್ರ ತಪಾಸನೆ ಉಚಿತ ಶಿಬಿರ ಜರುಗಿತು. ಡಾ.ಪ್ರತಿಕ್ಷಾ ಸಾಗರ, ನಿಂಗಪ್ಪ ಶೆಲ್ಲೆಪ್ಪಗೋಳ, ಗೂರಯ್ಯ ಮಠಪತಿ ಇತರರಿದ್ದರು.
ತೆಲಸಂಗ ಗ್ರಾಮದ ಪ್ರಾಥಮಿಕ ಕಷಿ ಪತ್ತಿನ ಸಹಕಾರಿ ಸಂಘದಲ್ಲಿ ಸಹಕಾರ ಸಪ್ತಾಹದ ಅಂಗವಾಗಿ ನೇತ್ರ ತಪಾಸನೆ ಉಚಿತ ಶಿಬಿರ ಜರುಗಿತು. ಡಾ.ಪ್ರತಿಕ್ಷಾ ಸಾಗರ, ನಿಂಗಪ್ಪ ಶೆಲ್ಲೆಪ್ಪಗೋಳ, ಗೂರಯ್ಯ ಮಠಪತಿ ಇತರರಿದ್ದರು.
Published on
ತೆಲಸಂಗ: ತಂತ್ರಜ್ಞಾನದ ಅತಿಯಾದ ಬಳಕೆ, ಮೊಬೈಲ್, ಕಂಪ್ಯೂಟರ್ ಪರದೆಗಳತ್ತ ನಿರಂತರ ನೋಟ ಹಾಗೂ ಬದಲಾದ ಜೀವನಶೈಲಿ ಕಣ್ಣಿನ ಸಮಸ್ಯೆಗಳಿಗೆ ಕಾರಣವಾಗುತ್ತಿವೆ. ಹೀಗಾಗಿ, ಕಣ್ಣಿನ ಆರೋಗ್ಯ ಜಾಗತಿ ಅಗತ್ಯ ಎಂದು ಡಾ.ಪ್ರತಿಕ್ಷಾ ಸಾಗರ ಹೇಳಿದರು.
ಪ್ರಾಥಮಿಕ ಕಷಿ ಪತ್ತಿನ ಸಹಕಾರಿ ಸಂಘದಲ್ಲಿ ಸಹಕಾರ ಸಪ್ತಾಹ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ನೇತ್ರ ತಪಾಸಣೆ ಉಚಿತ ಶಿಬಿರದಲ್ಲಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನ ಮಕ್ಕಳಿಂದ ಹಿಡಿದು ವದ್ಧರವರೆಗೆ ಎಲ್ಲರಿಗೂ ದಷ್ಟಿ ದೋಷ ಕಾಡುತ್ತಿದೆ. ಇದಕ್ಕೆ ಡಿಜಿಟಲ್ ಸಾಧನಗಳಿಂದ ಹೊರಹೊಮ್ಮುವ ನೀಲಿ ಬೆಳಕು ಕಣ್ಣುಗಳ ಒಣಗುವಿಕೆ, ಅಸ್ಪಷ್ಟ ದಷ್ಟಿ ಮತ್ತು ತಲೆನೋವಿಗೆ ಕಾರಣವಾಗುತ್ತಿದೆ. ಕಣ್ಣುಗಳ ಆರೋಗ್ಯ ನಿರ್ಲಕ್ಷಿಸಿದರೆ ಭವಿಷ್ಯದಲ್ಲಿ ಶಾಶ್ವತ ಅಂಧತ್ವ ಎದುರಿಸಬೇಕಾಗಬಹುದು ಎಂದು ಎಚ್ಚರಿಸಿದರು.
ಪಿಕೆಪಿಎಸ್ ಅಧ್ಯಕ್ಷ ನಿಂಗಪ್ಪ ಶೆಲ್ಲೆಪ್ಪಗೋಳ, ಗೂರಯ್ಯ ಮಠಪತಿ, ಭೀಮಪ್ಪ ಹಾದ್ನೂರ, ಲಕ್ಷ್ಮಣ ಮೋರೆ, ಪಂಡಿತಯ್ಯ ಮಠಪತಿ, ಪ್ರಶಾಂತ ಪಡಸಲಗಿ, ಈರಣ್ಣ.ಜಿ., ಮೇಘಾ ಮುಚ್ಚಡಿ, ಕವಿತಾ ಬುಳಶೆಟ್ಟಿ, ಸಹನಾ ಕಾಂಬಳೆ, ಶ್ರೀರಕ್ಷಾ ಮಾನೆ, ಪ್ರಶಾಂತ ಕಾಂಬಳೆ, ಅಕ್ಷತಾ ಕಾಂಬಳೆ, ಭಾಗ್ಯಶ್ರೀ ಕಿತ್ತೂರು, ಇಬಾದುಲ್ಲಾ ಹಿಪ್ಪರಗಿ, ರಫಿಕ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net