ಜ್ಞಾನ ವೃದ್ಧಿಗೆ ವಸ್ತು ಪ್ರದರ್ಶನ ಪೂರಕ

ಪಾರಿಶ್ವಾಡ ಗ್ರಾಮದ ಹನಿವೆಲ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಸುಭಾಸ ಗುಳಶೆಟ್ಟಿ, ಸುಜಾತಾ ಹಿರೇಮಠ, ಶಿವಾನಂದ ಪಾಟೀಲ, ಶಂಕರಗೌಡ ಪಾಟೀಲ ಇತರರಿದ್ದರು.
ಪಾರಿಶ್ವಾಡ ಗ್ರಾಮದ ಹನಿವೆಲ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಸುಭಾಸ ಗುಳಶೆಟ್ಟಿ, ಸುಜಾತಾ ಹಿರೇಮಠ, ಶಿವಾನಂದ ಪಾಟೀಲ, ಶಂಕರಗೌಡ ಪಾಟೀಲ ಇತರರಿದ್ದರು.
Published on

ವಿದ್ಯಾರ್ಥಿಗಳ ಪ್ರತಿಭೆ ಹೊರತರಲು ವಸ್ತು ಪ್ರದರ್ಶನಗಳು ಉತ್ತಮ ವೇದಿಕೆ ಎಂದು ಹನಿವೆಲ್ ಇಂಟರ್ ನ್ಯಾಷನಲ್ ಶಾಲೆ ಅಧ್ಯಕ್ಷ ಸುಭಾಸ ಗುಳಶೆಟ್ಟಿ ಹೇಳಿದರು.

ಪಾರಿಶ್ವಾಡ ಗ್ರಾಮದ ಹನಿವೆಲ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಸ್ತು ಪ್ರದರ್ಶನ ‘ಆವಿಷ್ಕಾರ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯಪುಸ್ತಕ ಜ್ಞಾನಕ್ಕೆ ಸೀಮಿತವಾಗದೆ, ವಿವಿಧ ಮಾದರಿಗಳು ಹಾಗೂ ಪ್ರಯೋಗಗಳ ಮೂಲಕ ಪ್ರಾಯೋಗಿಕವಾಗಿ ಅರ್ಥೈಸಿಕೊಳ್ಳಬೇಕು ಎಂದರು.
ಪ್ರಾಚಾರ್ಯೆ ಸುಜಾತಾ ಹಿರೇಮಠ ಮಾತನಾಡಿ, ವಸ್ತು ಪ್ರದರ್ಶನಗಳು ಪ್ರತಿಭೆ ಹೊರತರುವ ಜತೆಗೆ ಹೊಸ ಆಲೋಚನೆ ಬೆಳೆಸಲು ಹಾಗೂ ವೈಜ್ಞಾನಿಕ ಮನೋಭಾವ ರೂಪಿಸಲು ಸಹಕಾರಿಯಾಗುತ್ತವೆ ಎಂದರು.
ಶಿವಾನಂದ ಪಾಟೀಲ, ಶಂಕರಗೌಡ ಪಾಟೀಲ, ಶಿವಾನಂದ ಗುದ್ಲಿ, ಉದಯ ಬಡಸದ, ಮಹಾರುದ್ರಯ್ಯ ಢಮ್ಮಣಗಿಮಠ, ಆರ್.ಎಸ್. ಜಯಗೌಡರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net