ವ್ಯಾಯಾಮ, ಕ್ರೀಡೆಯಲ್ಲಿ ಭಾಗವಹಿಸುವಿಕೆ ಮುಖ್ಯ

ಅಡಹಳ್ಳಟ್ಟಿ ಗ್ರಾಮದಲ್ಲಿ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ವಚನ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿ ಅನನ್ಯಾ ಗುಡ್ಡಾಪುರ ವಚನ ಹೇಳಿದರು. ಸಿದ್ಧರಾಮ ಸ್ವಾಮೀಜಿ, ಡಾ.ಅಣ್ಣಪ್ಪ ಚಿಕ್ಕಟ್ಟಿ, ಭೀಮಾಶಂಕರ ಶರಣರು, ಅಪ್ಪಾಸಾಹೇಬ ಶರಣರು, ಸಿದ್ರಾಮಯ್ಯ ಮಠಪತಿ, ಶಿವು ಗುಡ್ಡಾಪುರ, ಗಂಗಪ್ಪ ಗುಡ್ಡಾಪುರ, ಚಿಂದಾನಂದ ಗುಡ್ಡಾಪುರ, ಬಸವರಾಜ ಸಿಂಧೂರ, ಶ್ರೀಶೈಲ ಪಾಟೀಲ, ಸದಾಶಿವ ಗುಡ್ಡಾಪುರ, ಕಲ್ಮೇಶ ಕಲಮಡಿ, ಸಂಗು ಸವದಿ, ಅರುಣ ಪಾಟೀಲ, ಮುತ್ತಪ್ಪ ಗುಡದಿನ್ನಿ ಇತರರಿದ್ದರು.

Published on
ಅಥಣಿ ಗ್ರಾಮೀಣ: ಯುವಕರು ದುಶ್ಚಟಗಳಿಂದ ದೂರವಿದ್ದು, ಉತ್ತಮ ಆರೋಗ್ಯಕ್ಕೆ ಕ್ರೀಡೆ, ವ್ಯಾಯಾಮ, ಪ್ರಾಣಾಯಾಮದಲ್ಲಿ ಭಾಗವಹಿಸಬೇಕು ಎಂದು ತಾಪಂ ಮಾಜಿ ಸದಸ್ಯ ಶಿವು ಗುಡ್ಡಾಪುರ ಹೇಳಿದರು.
ಅಥಣಿ ತಾಲೂಕಿನ ಅಡಹಳ್ಳಟ್ಟಿ ಗ್ರಾಮದಲ್ಲಿ ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಬಹುಮಾನ ಹಾಗೂ ಟ್ರೋಫಿ ವಿತರಣೆ ಸಮಾರಂಭದಲ್ಲಿ ಮಾತನಾಡಿ, ಆಟದಲ್ಲಿ ಸೋಲು-ಗೆಲುವು ಮುಖ್ಯವಲ್ಲ, ಭಾಗವಹಿಸುವಿಕೆ ಮುಖ್ಯ. ಜಾತ್ರೆಯಲ್ಲಿ ಯುವಕರು ಕ್ರೀಡಾ ಸ್ಫೂರ್ತಿ ಮೆರೆದಿದ್ದಾರೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಹಾಯ ನೀಡುವುದಾಗಿ ಭರವಸೆ ನೀಡಿದರು.
ಮಹಾರಾಷ್ಟ್ರದ ಖೋಜನವಾಡಿ ತಂಡ ಪ್ರಥಮ, ಅಡಹಳ್ಳಟ್ಟಿ ಬಸವೇಶ್ವರ ಚಾಲೆಂಜರ್ಸ್ ದ್ವಿತೀಯ, ಉಮರಾಣಿಯ ಡಿಸಿ ತಂಡ ತೃತೀಯ ಸ್ಥಾನ ಪಡೆದವು.
ಪಿಎಸ್‌ಐ ಚಂದ್ರಶೇಖರ ಸಾಗನೂರ ಮಾತನಾಡಿದರು. ಕಲ್ಮೇಶ ಕಲಮಡಿ, ಶ್ರೀಶೈಲ ಖೋತ, ಚಿದಾನಂದ ಮಠಪತಿ, ಶ್ರೀಶೈಲ ತಾಂವಶಿ, ವಿನಾಯಕ ದೂಳಶೆಟ್ಟಿ, ಬಾಹುರಾಜ ತಾಂವಶಿ, ಗುರುದೇವ ಗುಡ್ಡಾಪುರ, ಅರುಣ ಹೊನವಾಡ, ಸುನೀಲ ನಾಟಿಕಾರ, ಈರಪ್ಪ ನಾಯಿಕ, ಗಂಗಾಧರ ಕೆರಿ, ಸುರೇಶ ಶೇಗುಣಶಿ, ಶಂಕರ ಹೊನವಾಡ, ಅಭಿಷೇಕ ಜನವಾಡ, ಮಹಾಂತೇಶ ಹಾರೂಗೇರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net