ಅಕ್ರಮ ಸಂಬಂಧ, 2 ಕೋಟಿ ರೂ. ವಿಮೆಗಾಗಿ ನಡೆದಿರುವ ಮಾಜಿ ಸೈನಿಕ ಕೊಲೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಇದೊಂದು ಪೂರ್ವನಿಯೋಜಿತ ಕೊಲೆ ಎಂಬುದು ಮೃತ ಸೈನಿಕನ ಪತ್ನಿ ಸುಮಾ ಮಂಜರಿಗಿ, ಪುಂಡಲಿಕ ಡೊಂಬರ, ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ(ಆರ್‌ಎಫ್‌ಎಸ್‌ಎಲ್) ಅಧಿಕಾರಿ ನಾಗರಾಜ್ ಪಿ.ಎಂ., ಸಚಿನ್ ಸೇಲಾರ, ಅಪ್ಪಾಸಾಬ ನಾಯಿಕವಾಡಿ, ಚನ್ನಪ್ಪ ಅಡವಿಸ್ವಾಮಠ, ಅಶೋಕ ಗುಜನಾಳ, ಬಸವಾರಜ್ ಬಸ್ಮೆ, ರಾಹುಲ ಜೋಗಿ ಎಂಬುರ ಬಂಧನದಿಂದ ಬೆಳಕಿಗೆ ಬಂದಿದೆ.